ಬುಧವಾರ, ಜೂನ್ 23, 2021
28 °C

ದುರ್ಗಾಂಬಿಕಾ ಜಾತ್ರೆ; ಕುಸ್ತಿ ಪಂದ್ಯ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯ ಗುರುವಾರ ಆರಂಭವಾಯಿತು.ನಗರದ ಬೀರಲಿಂಗೇಶ್ವರ ದೇವಸ್ಥಾನದ ಕುಸ್ತಿ ಅಖಾಡದಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಪಂದ್ಯಗಳಿಗೆ ದೇವಸ್ಥಾನದ ಧರ್ಮದರ್ಶಿ ಸಮಿತಿ ಹಾಗೂ ಮುಖಂಡರು ಚಾಲನೆ ನೀಡಿದರು.ವಿವಿಧ ವಿಭಾಗಗಳಲ್ಲಿ ನಡೆಯುವ ಕುಸ್ತಿ ಪಂದ್ಯಕ್ಕೆ ಆಕರ್ಷಕ ನಗದು ಬಹುಮಾನವಿದೆ. ಮಾರ್ಚ್ 3ರಂದು ಪಂದ್ಯಗಳು ಸಮಾರೋಪಗೊಳ್ಳಲಿವೆ.ಉತ್ತಮ ಪ್ರದರ್ಶನ ನೀಡಿದ ಕುಸ್ತಿ ಪಟುವಿಗೆ ದೇವಸ್ಥಾನದ ಧರ್ಮದರ್ಶಿ ಸಮಿತಿ ವತಿಯಿಂದ ರೂ 50 ಸಾವಿರದವರೆಗೆ ನಗದು ಬಹುಮಾನ ನೀಡಲಾಗುವುದು ಹಾಗೂ ಕೆರೆಗರಡಿ ಮನೆತನದ ವತಿಯಿಂದ ಬೆಳ್ಳಿ ಗದೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.