ಶನಿವಾರ, ಜನವರಿ 25, 2020
28 °C

ದುರ್ನಾತ ತಪ್ಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾನಗರ ಪಾಲಿಕೆ ಮೇಯರ್ ಅಶ್ಪಾಕ್ ಅಹ್ಮದ್ ಚುಲಬುಲ್ ಅವರ ನಿವಾಸ ನಗರದ ಮೋಮಿನಪುರ ವಾರ್ಡ್ ಸಂಖ್ಯೆ 25ರಲ್ಲೆ ಕಸದ ರಾಶಿ ನಿವಾಸಿಗಳನ್ನು ಅಸಹನೀಯ ಬದುಕಿಗೆ ದೂಡಿದೆ.ಮೇಯರ್ ಮನೆ ಹಿಂಭಾಗದ ಕಸದ ಕೊಂಪೆಯನ್ನು ಕೂಡಲೆ ಸ್ಥಳಾಂತರಿಸಿ ಆ ಪ್ರದೇಶದಲ್ಲೊಂದು ಕಸದ ತೊಟ್ಟಿ ಕೂರಿಸಲು ಗುಲ್ಬರ್ಗ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಆಗ್ರಹಿಸಿದೆ.ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅಸೋಸಿಯೇಶನ್ ಮೋಮಿನ್‌ಪುರ ಬ್ಲಾಕ್ ಸಂಚಾಲಕ ಇಮ್ತಿಯಾಜ್, ಯುವ ಘಟಕದ ಅಧ್ಯಕ್ಷ ಅಜರ್ ಉಲ್ ಹಕ್ ಮುಬಾರಕ್, ಮೇಯರ್ ಮನೆ ಹಿಂಭಾಗದ ಕಸದ ರಾಶಿ ರಸ್ತೆಗುಂಟ ಪಸರಿಸಿದ್ದು ಅಲ್ಲಿಯ ನಿವಾಸಿಗಳಿಗೆ ದುರ್ನಾತ ಬೀರುತ್ತಿದೆ. ಕಸದಿಂದಾಗಿ ನಾಯಿಗಳ ಹಿಂಡು ಜಮಾವಣೆಯಾಗಿ ನಿವಾಸಿಗಳಲ್ಲಿ ಭೀತಿ ಮೂಡಿಸಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಸದರಿ ಸ್ಥಳದ ಸ್ವಚ್ಛತೆ ಕುರಿತು ಕ್ರಮ ಕೈಗೊಳ್ಳದ ಪಾಲಿಕೆ ನೈರ್ಮಲ್ಯ ನಿರೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದ್ದಾರೆ. 

ಪ್ರತಿಕ್ರಿಯಿಸಿ (+)