ಬುಧವಾರ, ಜೂನ್ 23, 2021
29 °C

ದುರ್ಬಲಗೊಂಡ ಸೌರ ಬಿರುಗಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುರ್ಬಲಗೊಂಡ ಸೌರ ಬಿರುಗಾಳಿ

ವಾಷಿಂಗ್ಟನ್ (ಪಿಟಿಐ): ಐದು ವರ್ಷಗಳಲ್ಲೇ ಅತ್ಯಂತ ಬೃಹತ್ ಎನ್ನಲಾದ ಸೌರ ಬಿರುಗಾಳಿಯು ಭೂಮಿಗೆ ಅಪ್ಪಳಿಸುವುದು ಮುಂದುವರಿದಿದ್ದು, ಮುಂದಿನ ಕೆಲವು ಗಂಟೆಗಳ ಕಾಲ ಭೂಮಿಯಲ್ಲಿರುವ ವಿದ್ಯುತ್ ಸಂಪರ್ಕ ಮತ್ತು ಸಂವಹನ ಜಾಲ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಬಾಹ್ಯಾಕಾಶ ಹವಾಮಾನ ತಜ್ಞರು ಶಂಕಿಸಿದ್ದಾರೆ.ಆದಾಗ್ಯೂ, ಬಿರುಗಾಳಿಯ ವೇಗವು ಈಗ  `ಮಧ್ಯಮ ಮಟ್ಟ~ದಲ್ಲಿದೆ. ಆದರೆ, ಅದರಿಂದಾಗಿ ಯಾವುದೇ ಪರಿಣಾಮ ಆಗಲಾರದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.ಮಂಗಳವಾರ ಸೂರ್ಯನ ಮೇಲ್ಮೈಯಿಂದ ಎರಡು ಪ್ರಬಲ ಸೌರ ಜ್ವಾಲೆಗಳು ಚಿಮ್ಮಿದ್ದವು. ಆ ಬಳಿಕ ಪ್ಲಾಸ್ಮಾ  ಹಾಗೂ ವಿದ್ಯುದಾವಿಷ್ಟ ಕಣಗಳನ್ನು ಹೊಂದಿದ ತರಂಗವು ಭೂಮಿಯತ್ತ ಧಾವಿಸಲು ಆರಂಭಿಸಿತ್ತು.ಅಂತರಿಕ್ಷದಲ್ಲಿ ಪ್ರತಿ ಗಂಟೆಗೆ 40 ಲಕ್ಷ ಮೈಲು ವೇಗದಲ್ಲಿ ಚಲಿಸಿದ ಈ ತರಂಗ ಗುರುವಾರ ಭಾರತೀಯ ಕಾಲಮಾನ ಮುಂಜಾನೆ 4.15ರ ಸುಮಾರಿಗೆ ಭೂಮಿಗೆ ತಲುಪಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತದ ಬಾಹ್ಯಾಕಾಶ ಹವಾಮಾನ ಮುನ್ಸೂಚನಾ ಕೇಂದ್ರದ ತಜ್ಞರು ಹೇಳಿದ್ದಾರೆ.ಕರೊನಲ್ ಮಾಸ್ ಇಜೆಕ್ಷನ್ (ಸಿಎಂಇ) ಎಂದು ಕರೆಯಲಾಗುವ ಈ ತರಂಗವು ನೇರವಾಗಿ ಭೂಮಿಗೆ ಅಪ್ಪಳಿಸದಿದ್ದರೂ, ಇದು ಭೂಮಿಯ ಕಾಂತ ಕ್ಷೇತ್ರದೊಂದಿಗೆ ದಿನವಿಡೀ ಘರ್ಷಣೆಯಲ್ಲಿ ತೊಡಗಲಿದೆ ಎಂದೂ ಅವರು ಹೇಳಿದ್ದಾರೆ.ಈ ಮಧ್ಯೆ, ಸೌರ ಬಿರುಗಾಳಿಯು ಭೂಮಿಯ ಕಾಂತವಲಯವನ್ನು ಪ್ರವೇಶಿಸಿದೆ ಎಂದು ನಾಸಾ ಹೇಳಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.