ದುರ್ಬಲರು

7

ದುರ್ಬಲರು

Published:
Updated:

ಅಧಿಕಾರಕ್ಕಾಗಿ ವಾಮ

ಮಾರ್ಗದ ಬಳಕೆ

ಪರಿಣಾಮ ಬೆಂಬಿಡದ

ಜೀವ ಬೆದರಿಕೆ

ತೊಡೆ ತಟ್ಟಲಷ್ಟೇ

ಸೀಮಿತವಾಯ್ತು

ಉತ್ತರಕುಮಾರರ

ಎದೆಗಾರಿಕೆ!

ಶುದ್ಧವಿದ್ದಿದ್ದರೆ ನಡತೆ

ಬೇಕಿತ್ತೆ ಆರಕ್ಷಕರ ಭದ್ರತೆ?

ಲಪಟಾಯಿಸಿದರೆ

ಪರರ ಸ್ವತ್ತು

ಕಾಡದಿರುವುದೇ ಆಪತ್ತು!

ಸಜ್ಜನರಾಳಿದ ಕನ್ನಡ ನಾಡಿದು

ಬೆಚ್ಚದ ಕೆಚ್ಚೆದೆ ಸಂಸ್ಕೃತಿ

ದುರ್ಬಲರಂತೆ ರಕ್ಷಣೆ ಬಯಸಿ

ಮಾಡಿದರು ಘನತೆ ಅವನತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry