ದುರ್ಬಲ ಕಾಯ್ದೆಗೆ ಸಹಿ: ಭಾರತದ ತವಕ?

7
ಪರಮಾಣು ವಿಪತ್ತು ಬಾಧ್ಯತಾ ಮಸೂದೆ

ದುರ್ಬಲ ಕಾಯ್ದೆಗೆ ಸಹಿ: ಭಾರತದ ತವಕ?

Published:
Updated:

ನವದೆಹಲಿ (ಪಿಟಿಐ): ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಮೆರಿಕ ಭೇಟಿ ವೇಳೆ, ‘ಪರಮಾಣು ವಿಪತ್ತು ಬಾಧ್ಯತಾ ಕಾಯ್ದೆ’ ದುರ್ಬಲಗೊಳಿಸುವ ಒಪ್ಪಂದಕ್ಕೆ ಭಾರತವು ಸಹಿ ಹಾಕಬಹು­ದೆಂಬ ಶಂಕೆ ಮೂಡಿದ್ದು, ವಿವಾದ ಎಬ್ಬಿಸಿದೆ.ಭಾರತೀಯ ಪರಮಾಣು ಇಂಧನ ನಿಗಮ (ಎನ್‌ಪಿಸಿಐಎಲ್‌) ಮತ್ತು ಅಮೆರಿಕ ಮೂಲದ ವೆಸ್ಟಿಂಗ್‌­ಹೌಸ್‌ ಎಲೆಕ್ಟ್ರಿಕ್‌ ಕಂಪೆನಿಗಳ ನಡುವಣ ಒಪ್ಪಂದ ಪ್ರಸ್ತಾವದ ಬಗ್ಗೆ ರಕ್ಷಣಾ ವ್ಯವಹಾರಗಳ ಸಂಪುಟ ಸಮಿತಿಯು ಪರಿಶೀಲನೆ ನಡೆಸಲಿದೆ ಎಂದು ವರದಿಗಳು ಹೇಳಿವೆ.

ಭಾರತಕ್ಕೆ ಪರಮಾಣು ರಿಯಾಕ್ಟರ್‌­ಗಳನ್ನು ಮಾರಾಟ ಮಾಡುವುದಕ್ಕೆ ಪರಮಾಣು ವಿಪತ್ತು ಬಾಧ್ಯತಾ ಕಾಯ್ದೆಯು ತೊಡಕಾಗಿದೆ ಎಂಬುದು ಅಮೆರಿಕದ ವಾದ.ಅಟಾರ್ನಿ ಜನರಲ್‌ ಜಿ.ಇ.ವಾಹನ್ವತಿ ಅವರು, ಕೇಂದ್ರದ ಪರಮಾಣು ಇಂಧನ ಇಲಾಖೆಗೆ ನೀಡಿದ ಅಭಿಪ್ರಾಯದಲ್ಲಿ ‘ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಕಾಯ್ದೆಯ 17ನೇ ಕಲಂಗೆ ಬದ್ಧವಾಗಿ­ರುವುದು ಘಟಕದ ನಿರ್ವಾಹಕ ಸಂಸ್ಥೆಯ ವಿವೇಚನೆಗೆ ಬಿಟ್ಟ ವಿಷಯ’ ಎಂದಿದ್ದಾರೆ.ಈ ಅಭಿಪ್ರಾಯವು, ಅಮೆರಿಕದೊಂದಿ­ಗಿನ ಒಪ್ಪಂದಕ್ಕೆ ಸಹಿ ಹಾಕಲು ಭಾರತಕ್ಕೆ ಅವಕಾಶ ಮಾಡಿಕೊಡುತ್ತದೆ ಎನ್ನಲಾಗಿದೆ.

ಆದರೆ, ಕೇಂದ್ರ ಸರ್ಕಾರವು ಈ ವಿವಾದಕ್ಕೆ ತೀವ್ರ ಪ್ರತಿಕ್ರಿಯೆಯನ್ನೇನೂ ವ್ಯಕ್ತಪಡಿಸಿಲ್ಲ. ಪರಮಾಣು ಬಾಧ್ಯತಾ ಮಸೂದೆಯನ್ನು ದುರ್ಬಲ ಗೊಳಿಸು­ವುದಿಲ್ಲ; ಭಾರತದ ಹಿತಾಸಕ್ತಿ ಯನ್ನು ರಕ್ಷಿಸಲಾಗುವುದು ಎಂದು ಅದು ಹೇಳಿದೆ.ಪರಮಾಣು ಅಗತ್ಯ: ಭಾರತಕ್ಕೆ ಪರಮಾಣು ಇಂಧನದ ಅಗತ್ಯವಿದೆ. ಆದರೆ ಅದಕ್ಕಾಗಿ ತನ್ನದೇ ನೀತಿ– ನಿಬಂಧನೆ­ಗಳನ್ನು ಅದು ಹೊಂದಿರಲಿದೆ ಎಂದು ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ. ಉಭಯ ರಾಷ್ಟ್ರಗಳೂ ತಮ್ಮದೇ ನಿಲುವುಗಳನ್ನು ಹೊಂದಿವೆ. ಉದ್ದೇಶಿತ ಮಾತುಕತೆಯು ಎರಡೂ ರಾಷ್ಟ್ರಗಳಿಗೂ ಅನು­ಕೂಲ­ವಾಗಿ ಪರಿಣಮಿಸಬೇಕು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry