ದುರ್ಬಲ ತಂಡ ಎಂದು ಕಡೆಗಣಿಸಬೇಡಿ

7

ದುರ್ಬಲ ತಂಡ ಎಂದು ಕಡೆಗಣಿಸಬೇಡಿ

Published:
Updated:

ಚೆನ್ನೈ (ಐಎಎನ್‌ಎಸ್):‘ದುರ್ಬಲ ತಂಡ ಎಂದು ನಮ್ಮನ್ನು ಕಡೆಗಣಿಸಬೇಡಿ. ಅಕಸ್ಮಾತ್ ಆ ರೀತಿ ತಿಳಿದುಕೊಂಡು ಆಡಲು ಮುಂದಾದರೆ ಸಮಸ್ಯೆಗೆ ಸಿಲುಕಿ ಕೊಳ್ಳುವಿರಿ’ ಎಂದು ಕೀನ್ಯಾ ತಂಡದ ನಾಯಕ ಜಿಮ್ಮಿ ಕಮಾಂಡೆ ಎಚ್ಚರಿಕೆ ನೀಡಿದ್ದಾರೆ.‘ಯಾವುದೇ ತಂಡವನ್ನು ಲಘುವಾಗಿ ನೋಡಬೇಡಿ.ಏಕೆಂದರೆ ಕಡಿಮೆ ರ್ಯಾಂಕ್ ಹೊಂದಿ ರುವ ತಂಡಗಳು ಕೂಡ ಶಾಕ್ ನೀಡುವ ಸಾಮರ್ಥ್ಯ ಹೊಂದಿವೆ.ನಾವು ಕೆಲ ತಿಂಗಳಿನಿಂದ ಕಠಿಣ ಅಭ್ಯಾಸ ನಡೆಸುತ್ತಿದ್ದೇವೆ.ಭಾರತಕ್ಕೆ ನಾವು ಮೊದಲೇ ಆಗಮಿಸಿದ್ದೆವು.ಬಳಿಕ ಶ್ರೀಲಂಕಾದಲ್ಲಿ ಅಭ್ಯಾಸ ಪಂದ್ಯ ಆಡಿದೆವು’ ಎಂದು ಅವರು ಹೇಳಿದ್ದಾರೆ.ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಅಭ್ಯಾಸ ನಡೆಸಿದ ಬಳಿಕ ಕಮಾಂಡೆ ಸುದ್ದಿಗಾರರೊಂದಿಗೆ ಮಾತನಾಡಿದರು.‘ನ್ಯೂಜಿಲೆಂಡ್ ಅತ್ಯುತ್ತಮ ತಂಡಗಳಲ್ಲೊಂದು. ಅವರು ಇತ್ತೀಚಿನ ಸರಣಿಗಳಲ್ಲಿ ಕೆಟ್ಟ ಪ್ರದರ್ಶನ ತೋರಿರಬಹುದು. ಆದರೆ ಈಗ ಅವರು ಗಾಯಗೊಂಡ ಸಿಂಹದಂತೆ’ ಎಂದರು.ತಂಡದ ಸಿದ್ಧತೆ ಬಗ್ಗೆ ಮತ್ತಷ್ಟು ವಿವರ ನೀಡಿದ್ದು ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್. ‘ಫಿಟ್‌ನೆಸ್ ಹಾಗೂ ಫೀಲ್ಡಿಂಗ್ ಬಗ್ಗೆ ನಾವು ಹೆಚ್ಚು ಗಮನ ಹರಿಸಿದ್ದೇವೆ.ಒಲಿಂಪಿಕ್ಸ್ ನ 800 ಮೀಟರ್ ಓಟದಲ್ಲಿ ಕೆಲವರು ಚಿನ್ನ ಗೆಲ್ಲಬಹುದು.ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ತಂಡಕ್ಕೆ ಉತ್ತಮ ಅವಕಾಶವಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry