ದುರ್ವರ್ತನೆ: ಮಾರ್ಗ ಮಧ್ಯ ಹಿಂದಿರುಗಿದ ವಿಮಾನ

7

ದುರ್ವರ್ತನೆ: ಮಾರ್ಗ ಮಧ್ಯ ಹಿಂದಿರುಗಿದ ವಿಮಾನ

Published:
Updated:

ದುಬೈ (ಪಿಟಿಐ): ಬಹರೇನ್‌ನಿಂದ ಪ್ಯಾರಿಸ್‌ಗೆ ತೆರಳುತ್ತಿದ್ದ ಗಲ್ಫ್ ಏರ್ ವಿಮಾನದೊಳಗೆ ಇದ್ದ ಪ್ರಯಾಣಿಕರ ಗುಂಪೊಂದು ದುರ್ವರ್ತನೆ ತೋರಿದ್ದರಿಂದ ವಿಮಾನದ ಕ್ಯಾಪ್ಟನ್ ವಿಮಾನವನ್ನು ಮಾರ್ಗ ಮಧ್ಯದಲ್ಲೇ ಹಿಂತಿರುಗಿಸಿ ಬಹರೇನ್‌ಗೆ ತಂದ ಘಟನೆ ನಡೆದಿದೆ.ಮಂಗಳವಾರ ಈ ಘಟನೆ ನಡೆದಿದೆ. ಬಹರೇನ್‌ನಿಂದ ಹೊರಟಿದ್ದ ವಿಮಾನ ಕುವೈತ್ ಸಮೀಪ ಬರುತ್ತಿದ್ದಂತೆಯೇ ವಿಮಾನದೊಳಗಿದ್ದ ಐವರು ಪ್ರಯಾಣಿಕರ ಗುಂಪಿನಲ್ಲಿದ್ದ ಮೂವರು ದುರ್ವರ್ತನೆ ತೋರಲು ಆರಂಭಿಸಿದರು. ಮಕ್ಕಳಿದ್ದಾರೆ, ಸುಮ್ಮನೆ ಕುಳಿತುಕೊಳ್ಳಿ ಎಂಬ ಸಹ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯ ಬುದ್ಧಿವಾದಕ್ಕೆ ಕಿವಿಗೊಡದ ಅವರು ಹಿಂಸಾಚಾರಕ್ಕೆ ಇಳಿದರು. ಇದರಿಂದ ಕಸಿವಿಸಿಗೊಂಡ ಕ್ಯಾಪ್ಟನ್ ವಿಮಾನವನ್ನು ವಾಪಸ್ ಬಹರೇನ್‌ಗೆ ತಂದು ದುರ್ವರ್ತನೆ ತೋರಿದ ಪ್ರಯಾಣಿಕರನ್ನು ಇಳಿಸಲು ನಿರ್ಧರಿಸಿದರು ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ. ಇವರೆಲ್ಲಾ ಫ್ರೆಂಚ್ ನಾಗರಿಕರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry