ದುಲೀಪ್ ಟ್ರೋಫಿ: ಕೈಫ್ ಶತಕ

7

ದುಲೀಪ್ ಟ್ರೋಫಿ: ಕೈಫ್ ಶತಕ

Published:
Updated:

ಚೆನ್ನೈ (ಪಿಟಿಐ): ಮೊಹಮ್ಮದ್ ಕೈಫ್ (ಬ್ಯಾಟಿಂಗ್ 102) ಅವರ ಬ್ಯಾಟಿಂಗ್ ನೆರವಿನಿಂದ ಕೇಂದ್ರ ವಲಯ ತಂಡದವರು ಶನಿವಾರ ಇಲ್ಲಿ ಆರಂಭವಾದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ಎದುರು ಆರಂಭಿಕ ಆಘಾತದಿಂದ ಪಾರಾಗಿ ಮುಂದೆ ನುಗ್ಗಿತು.ಕೇಂದ್ರ ವಲಯ ತಂಡವು ಪಂದ್ಯದ ಮೊದಲ ದಿನದ ಆಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 292 ರನ್ ಗಳಿಸಿದೆ.ಈ ತಂಡ ಒಂದು ಹಂತದಲ್ಲಿ 90 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು.

ಆದರೆ ಕೈಫ್ ಹಾಗೂ ಅರ್ಧ ಶತಕ ಗಳಿಸಿದ ಪಿಯೂಷ್ ಚಾವ್ಲಾ ತಂಡಕ್ಕೆ ಆಧಾರಸ್ತಂಬವಾದರು. ಅವರು ಸಹನೆಯಿಂದ ಆಡುವ ಮೂಲಕ ಗಮನ ಸೆಳೆದರು.ಸಂಕ್ಷಿಪ್ತ ಸ್ಕೋರ್: ಕೇಂದ್ರ ವಲಯ: 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 292 (ಮೊಹಮ್ಮದ್ ಕೈಫ್ ಬ್ಯಾಟಿಂಗ್ 108, ಪಿಯೂಷ್ ಚಾವ್ಲಾ 52; ಅಭಿಮನ್ಯು ಮಿಥುನ್ 80ಕ್ಕೆ2, ಸ್ಟುವರ್ಟ್ ಬಿನ್ನಿ 47ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry