ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ: ಫೈನಲ್‌ಗೆ ಕೇಂದ್ರ ವಲಯ

7

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ: ಫೈನಲ್‌ಗೆ ಕೇಂದ್ರ ವಲಯ

Published:
Updated:

ಚೆನ್ನೈ (ಪಿಟಿಐ): ಕೇಂದ್ರ ವಲಯ ತಂಡ ದುಲೀಪ್ ಟ್ರೋಫಿ ಟೂರ್ನಿಯ ಫೈನಲ್ ಪ್ರವೇಶಿಸಿತು. ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ವಲಯ ವಿರುದ್ಧದ ಸೆಮಿಫೈನಲ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಕಂಡಿತು. ಆದರೆ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಕೇಂದ್ರ ವಲಯ ಫೈನಲ್‌ಗೆ ರಹದಾರಿ ಪಡೆದುಕೊಂಡಿತು.ಪಿಯೂಷ್ ಚಾವ್ಲಾ ನೇತೃತ್ವದ ಕೇಂದ್ರ ವಲಯ ಅಂತಿಮ ದಿನವಾದ ಮಂಗಳವಾರ 8 ವಿಕೆಟ್‌ಗೆ 530 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡಿತು. ಗೆಲುವಿಗೆ 641 ರನ್‌ಗಳ ಅಸಾಧ್ಯ ಗುರಿ ಪಡೆದ ದಕ್ಷಿಣ ವಲಯ ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ 39 ಓವರ್‌ಗಳಲ್ಲಿ 2 ವಿಕೆಟ್‌ಗೆ 152 ರನ್ ಗಳಿಸಿತ್ತು.ರಾಬಿನ್ ಉತ್ತಪ್ಪ (10) ಮತ್ತೆ ವಿಫಲರಾದರು. ದಿನೇಶ್ ಕಾರ್ತಿಕ್ 49 ರನ್ ಗಳಿಸಿ ಔಟಾದರು. ನಾಯಕ ಎಸ್. ಬದರೀನಾಥ್ (58) ಮತ್ತು ಮನೀಷ್ ಪಾಂಡೆ (32) ಅಜೇಯರಾಗಿ ಉಳಿದರು.ಇದಕ್ಕೂ ಮುನ್ನ 5 ವಿಕೆಟ್‌ಗೆ 378 ರನ್‌ಗಳಿಂದ ಆಟ ಮುಂದುವರಿಸಿದ ಕೇಂದ್ರ ವಲಯ ಬೇಗನೇ ಇನಿಂಗ್ಸ್ ಡಿಕ್ಲೇರ್ ಮಾಡಲಿಲ್ಲ. 104 ರನ್ ಗಳಿಸಿ ಔಟಾಗದೆ ಉಳಿದಿದ್ದ ರಾಬಿನ್ ಬಿಸ್ತ್ ತಮ್ಮ ಇನಿಂಗ್ಸ್‌ನ್ನು 160 ರನ್‌ಗಳವರೆಗೆ ವಿಸ್ತರಿಸಿದರು. 268 ಎಸೆತಗಳನ್ನು ಎದುರಿಸಿದ ಒಂದು ಸಿಕ್ಸರ್ ಹಾಗೂ 21 ಬೌಂಡರಿ ಗಳಿಸಿದರು.

ಈ ಇನಿಂಗ್ಸ್ ಮೂಲಕ ಬಿಸ್ತ್ ಬಿಸಿಸಿಐ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಈ ಬಾರಿಯ ರಣಜಿ ಋತುವಿನಲ್ಲಿ ಈ ಯುವ ಬ್ಯಾಟ್ಸ್‌ಮನ್ ಸಾವಿರಕ್ಕೂ ಅಧಿಕ ರನ್ ಪೇರಿಸಿದ್ದರು. ಮೂರನೇ ದಿನ 59 ರನ್‌ಗಳೊಂದಿಗೆ ಔಟಾಗದೆ ಉಳಿದುಕೊಂಡಿದ್ದ ಭುವನೇಶ್ವರ್  85 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.ಕೇಂದ್ರ ವಲಯ ತಂಡ ಫೈನಲ್‌ನಲ್ಲಿ ಪೂರ್ವ ವಲಯ ವಿರುದ್ಧ ಪೈಪೋಟಿ ನಡೆಸಲಿದೆ. ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಪೂರ್ವ ವಲಯ ತಂಡ ಉತ್ತರ ವಲಯ ವಿರುದ್ಧ ಇನಿಂಗ್ಸ್ ಮುನ್ನಡೆ ಪಡೆಯಿತು. ಫೈನಲ್ ಪಂದ್ಯ ಫೆಬ್ರುವರಿ 12 ರಿಂದ 16ರ ವರೆಗೆ ಇಂದೋರ್‌ನಲ್ಲಿ ನಡೆಯಲಿದೆ.ಸಂಕ್ಷಿಪ್ತ ಸ್ಕೋರ್: ಕೇಂದ್ರ ವಲಯ: ಮೊದಲ ಇನಿಂಗ್ಸ್ 92 ಓವರ್‌ಗಳಲ್ಲಿ 293 ಮತ್ತು ಎರಡನೇ ಇನಿಂಗ್ಸ್ 161 ಓವರ್‌ಗಳಲ್ಲಿ 8 ವಿಕೆಟ್‌ಗೆ 530 (ರಾಬಿನ್ ಬಿಸ್ತ್ 160, ಭುವನೇಶ್ವರ್ ಕುಮಾರ್ 85, ಪಿಯೂಷ್ ಚಾವ್ಲಾ 53, ಸ್ಟುವರ್ಟ್ ಬಿನ್ನಿ 38ಕ್ಕೆ 2, ಮನೀಷ್ ಪಾಂಡೆ 45ಕ್ಕೆ 2). ದಕ್ಷಿಣ ವಲಯ: ಮೊದಲ ಇನಿಂಗ್ಸ್ 54 ಓವರ್‌ಗಳಲ್ಲಿ 183 ಮತ್ತು ಎರಡನೇ  ಇನಿಂಗ್ಸ್ 39 ಓವರ್‌ಗಳಲ್ಲಿ 2 ವಿಕೆಟ್‌ಗೆ 152 (ಎಸ್. ಬದರೀನಾಥ್ ಔಟಾಗದೆ 58, ದಿನೇಶ್ ಕಾರ್ತಿಕ್ 49). ಪಂದ್ಯ ಡ್ರಾ, ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಕೇಂದ್ರ ವಲಯ ಫೈನಲ್‌ಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry