ದುಲೀಪ್ ಟ್ರೋಫಿ: ಯುವರಾಜ್ ಸಿಂಗ್ ದ್ವಿಶತಕ

7

ದುಲೀಪ್ ಟ್ರೋಫಿ: ಯುವರಾಜ್ ಸಿಂಗ್ ದ್ವಿಶತಕ

Published:
Updated:

ಹೈದರಾಬಾದ್ (ಪಿಟಿಐ): ಯುವರಾಜ್ ಸಿಂಗ್ (208) ಗಳಿಸಿದ ದ್ವಿಶತಕದ ನೆರವಿನಿಂದ ಉತ್ತರ ವಲಯ ತಂಡ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ವಿರುದ್ಧ ಮೇಲುಗೈ ಸಾಧಿಸಿದೆ.ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಉತ್ತರ ವಲಯ ಮೊದಲ ಇನಿಂಗ್ಸ್‌ನಲ್ಲಿ 451 ರನ್ ಪೇರಿಸಿತು. ಕೇಂದ್ರ ವಲಯ ತಂಡ ಎರಡನೇ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ 58 ಓವರ್‌ಗಳಲ್ಲಿ 5 ವಿಕೆಟ್‌ಗೆ 146 ರನ್ ಗಳಿಸಿತ್ತು.ನಾಯಕ ಮೊಹಮ್ಮದ್ ಕೈಫ್ (34) ಮತ್ತು ಮಹೇಶ್ ರಾವತ್ (14) ಔಟಾಗದೆ ಉಳಿದಿದ್ದರು. ಇದಕ್ಕೂ ಮುನ್ನ 4 ವಿಕೆಟ್ ನಷ್ಟಕ್ಕೆ 346 ರನ್‌ಗಳಿಂದ ಆಟ ಆರಂಭಿಸಿದ ಉತ್ತರ ವಲಯ ತನ್ನ ಮೊತ್ತವನ್ನು ಮತ್ತಷ್ಟು ಹಿಗ್ಗಿಸಿತು. `ಯುವಿ~ ಅವರ ಭರ್ಜರಿ ಆಟ ಇದಕ್ಕೆ ಕಾರಣ.133 ರನ್‌ಗಳಿಂದ ಆಟ ಮುಂದುವರಿಸಿದ ಪಂಜಾಬ್‌ನ ಬ್ಯಾಟ್ಸ್‌ಮನ್ ದ್ವಿಶತಕ ಪೂರೈಸಿದರು. 241 ಎಸೆತಗಳನ್ನು ಎದುರಿಸಿದ ಅವರು 33 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ತನಗೆ ದೀರ್ಘ ಇನಿಂಗ್ಸ್ ಆಡಲು ಸಾಧ್ಯ ಎಂಬುದನ್ನು ಅವರು ಈ ಮೂಲಕ ತೋರಿಸಿಕೊಟ್ಟರು.ಸಂಕ್ಷಿಪ್ತ ಸ್ಕೋರು:

ಉತ್ತರ ವಲಯ:
ಮೊದಲ ಇನಿಂಗ್ಸ್119.2 ಓವರ್‌ಗಳಲ್ಲಿ 451(ಶಿಖರ್ ಧವನ್ 121, ಯುವರಾಜ್ ಸಿಂಗ್ 208, ಪಾರಸ್ ದೋಗ್ರಾ 37, ಪ್ರವೀಣ್ ಕುಮಾರ್ 92ಕ್ಕೆ4, ಮುರಳಿ ಕಾರ್ತಿಕ್ 120ಕ್ಕೆ 4). ಕೇಂದ್ರ ವಲಯ: ಮೊದಲ ಇನಿಂಗ್ಸ್ 58 ಓವರ್‌ಗಳಲ್ಲಿ 5 ವಿಕೆಟ್‌ಗೆ 146 (ತನ್ಮಯ್ ಶ್ರೀವಾಸ್ತವ 23, ವಿನೀತ್ ಸಕ್ಸೇನಾ 33, ಮೊಹಮ್ಮದ್ ಕೈಫ್ ಬ್ಯಾಟಿಂಗ್ 34, ಮಹೇಶ್ ರಾವತ್ ಬ್ಯಾಟಿಂಗ್ 14, ಪರ್ವಿಂದರ್ ಅವಾನಾ 29ಕ್ಕೆ 2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry