ದುಲೀಪ್ ಟ್ರೋಫಿ: ಯುವಿ ಶತಕ

7

ದುಲೀಪ್ ಟ್ರೋಫಿ: ಯುವಿ ಶತಕ

Published:
Updated:

ವಿಶಾಖಪಟ್ಟಣ (ಪಿಟಿಐ): ಆರಂಭಿಕ ಸಂಕಷ್ಟ ಅನುಭವಿಸಿದ ಪೂರ್ವ ವಲಯ ತಂಡಕ್ಕೆ ಎಡಗೈ ಬ್ಯಾಟ್ಸ್‌ಮನ್ ಸೌರಭ್ ತಿವಾರಿ (ಬ್ಯಾಟಿಂಗ್ 84, 162ಎಸೆತ, 10ಬೌಂಡರಿ, 1ಸಿಕ್ಸರ್) ಆಸರೆಯಾದರು. ಇದರ ಪರಿಣಾಮ ಪೂರ್ವ ವಲಯ ಇಲ್ಲಿ ಭಾನುವಾರ ಆರಂಭವಾದ  ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನ ದಕ್ಷಿಣ ವಲಯ ವಿರುದ್ಧದ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಾಣುವ ಸಂಕಷ್ಟದಿಂದ ಪಾರಾಯಿತು.ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಕೇಂದ್ರ ವಲಯ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ವಲಯ ತಂಡದ ಯುವರಾಜ್ ಸಿಂಗ್ (133, 152ಎಸೆತ, 20ಬೌಂಡರಿ, 2ಸಿಕ್ಸರ್) ಶತಕ ಸಿಡಿಸಿದರು. ಸಂಕ್ಷಿಪ್ತ ಸ್ಕೋರು: ಪೂರ್ವ ವಲಯ 70 ಓವರ್‌ಗಳಲ್ಲಿ 6 ವಿಕೆಟ್‌ಗೆ 187 (ನಟರಾಜ್ ಬೆಹೆರಾ 11, ಸೌರಭ್ ತಿವಾರಿ ಬ್ಯಾಟಿಂಗ್ 84, ಶಿವ ಗೌತಮ್ 11, ಬಸಂತ್ ಮೊಹಾಂತಿ ಔಟಾಗದೆ 51; ಆರ್. ವಿನಯ್ ಕುಮಾರ್ 29ಕ್ಕೆ1, ಅಭಿಮನ್ಯು ಮಿಥುನ್ 43ಕ್ಕೆ2, ಸ್ಟುವರ್ಟ್ ಬಿನ್ನಿ 40ಕ್ಕೆ2). ದಕ್ಷಿಣ ವಲಯ ವಿರುದ್ಧದ ಪಂದ್ಯ.ಉತ್ತರ ವಲಯ: 90 ಓವರ್‌ಗಳಲ್ಲಿ 4 ವಿಕೆಟ್‌ಗೆ 346. (ರಾಹುಲ್ ದೇವನ್ 17, ಶಿಖರ್ ಧವನ್ 121, ನಿತಿನ್ ಸೈನಿ 35, ಯುವರಾಜ್ ಸಿಂಗ್ ಬ್ಯಾಟಿಂಗ್ 133, ಪರಸ್ ದೋಗ್ರಾ 30; ಪ್ರವೀಣ್ ಕುಮಾರ್ 72ಕ್ಕೆ2, ಮುರಳಿ ಕಾರ್ತಿಕ್ 92ಕ್ಕೆ1). ಕೇಂದ್ರ ವಲಯ ವಿರುದ್ಧದ ಪಂದ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry