ಭಾನುವಾರ, ಮೇ 9, 2021
26 °C

ದುಶ್ಚಟ ತ್ಯಜಿಸಲು ಯುವಕರಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಶರಣರ ತತ್ವ ಅಳವಡಿಸಿಕೊಂಡು ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂದು ಬಸವ ಧಾಮದ ಮಾತೆ ಬಸವೇಶ್ವರಿ ಹೇಳಿದರು.



ಸ್ಥಳೀಯ ಅಕ್ಕನಾಗಮ್ಮ ಕಾಲೇಜು ಆವರಣದಲ್ಲಿ ಶ್ರಾವಣ ಮಾಸ ಹಾಗೂ ಬಸವೇಶ್ವರ ಜಾತ್ರೆ ಅಂಗವಾಗಿ ಒಂದು ತಿಂಗಳ ವರೆಗೆ ಹಮ್ಮಿಕೊಂಡಿದ್ದ `ಅಕ್ಕ ಮಹಾದೇವಿ ಪುರಾಣ~ ಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.



ಬಸವಾದಿ ಶರಣರು ಸರಳ ಜೀವನ ನಡೆಸಿ ಮುಂದಿನವರಿಗೆ ಮಾದರಿಯಾಗಿದ್ದಾರೆ. ಅವರು ಜಾತಿ ಭೇದ ವ್ಯವಸ್ಥೆಯನ್ನು ಧಿಕ್ಕರಿಸಿ ಕಾಯಕ ನಿಷ್ಠೆಯೊಂದಿಗೆ ಜೀವನ ಸಾಗಿಸಿದರು. ಶರಣರ ಮಾರ್ಗದಲ್ಲಿ ಜೀವನ ನಡೆಸಬೇಕು. ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಗೂ ಗೌರವವಿದೆ. ಅದನ್ನು ಅರಿತು ನಡೆದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಇರುತ್ತದೆ ಎಂದು ಹೇಳಿದರು.



ಮಾಜಿ ಶಾಸಕ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಹೇಳಿದರು.



ಕೂಡಲಸಂಗಮದ ಅಭಿವೃದ್ಧಿ ಆಯುಕ್ತ ಪಿ.ಎಸ್.ಚಿನಿವಾಲ, ಸಾಹಿತಿ ಲ.ರು. ಗೊಳಸಂಗಿ, ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಸಿದ್ಧಲಿಂಗದೇವರು ಮಾತನಾಡಿದರು.



ಬಸವೇಶ್ವರ ದೇವಾಯದ ಆಡಳಿತ ಅಧಿಕಾರಿ ಎನ್.ವೈ. ಚಿಕ್ಕೊಂಡ, ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಹಾರಿವಾಳ, ಜಾತ್ರಾ ಸಮೀತಿ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಬಸವರಾಜ ಗೊಳಸಂಗಿ ಮುಂತಾದವರು ಹಾಜರಿದ್ದರು.



ರವಿ ರಾಠೋಡ ಸ್ವಾಗತಿಸಿದರು, ಸಂಗಮೇಶ ಓಲೇಕಾರ ವಂದಿಸಿದರು, ಸಂಗಮೇಶ ಪೂಜಾರಿ ನಿರೂಪಿಸಿದರು.



ತುಲಾಭಾರ:  ಒಂದು ತಿಂಗಳವರೆಗೆ ಪ್ರವಚನ ನಡೆಸಿಕೊಟ್ಟ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಅವರನ್ನು ಪುರಸಭೆ ಸದಸ್ಯ ನೀಲು ನಾಯಕ ಹಾಗೂ ಈರನಗೌಡ ಪಾಟೀಲ ದಂಪತಿಗಳು ನಾಣ್ಯಗಳಿಂದ ತುಲಾಭಾರ ಮಾಡಿದರು. 



 ಸಂಗೀತ ಸೇವೆ ಸಲ್ಲಿಸಿದ ಗಮಾಯಿ ಶ್ರೀಮಂತ ಅವಟಿ, ಶ್ರೀಕಾಂತ ಅಳ್ಳಗಿ, ಶರಣಪ್ಪ ಹೂಗಾರ ಹಾಗೂ ಸಿದ್ಧಣ್ಣ ಕಲ್ಲೂರ ಇತರರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.