ದುಶ್ಚಟ ತ್ಯಜಿಸಲು ಯುವಕರಿಗೆ ಸಲಹೆ

7

ದುಶ್ಚಟ ತ್ಯಜಿಸಲು ಯುವಕರಿಗೆ ಸಲಹೆ

Published:
Updated:
ದುಶ್ಚಟ ತ್ಯಜಿಸಲು ಯುವಕರಿಗೆ ಸಲಹೆ

ಲಕ್ಕುಂಡಿ (ಗದಗ ತಾ.): ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳ ಬೇಕು ಎಂದು ಯುವ ಸಮಾಜ ಸೇವಕ ಸಂಗಮೇಶ ತಿಮ್ಮೋಪೂರ ಹೇಳಿದರು.ತಾಲ್ಲೂಕಿನ ಲಕ್ಕುಂಡಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ  ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತ ನಾಡಿದ ಅವರು, ಯುವಕರು ದುಶ್ಚಟದಿಂದ ದೂರವಿದ್ದು, ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ಯುವ ಧುರೀಣ ಅಮರೇಶ ಕರೆಕಲ್ ಮಾತ ನಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗವ್ವ ಮಜ್ಜಿಗುಡ್ಡ ಪಂದ್ಯಾವಳಿಗೆ ಚಾಲನೆ ನೀಡಿದರು. ತಿಪ್ಪಣ್ಣ ಅಂಬಕ್ಕಿ ಅಧ್ಯಕ್ಷತೆ ವಹಿಸಿದ್ದರು, ಆಯ್. ಎಸ್ ಮಟ್ಟಿ, ಎನ್. ಕೆ. ಅಬಕ್ಕಿ, ಶರಣಪ್ಪ ಉದ್ಧಾರ, ವೀರಣ್ಣ ಕುಂಬಾರ ಹಾಜರಿದ್ದರು. ಸ್ವಾಮಿ ವಿವೇಕಾನಂದ ಕ್ರೀಡಾ ಹಾಗೂ ಸಾಂಸ್ಕ್ರತಿಕ ಯುವ ಮಂಡಳಿ ಅಧ್ಯಕ್ಷ ಮೃತ್ಯುಂಜಯ ಕುಲಕರ್ಣಿ ನಿರೂಪಿಸಿ ವಂದಿಸಿದರು.ಫಲಿತಾಶ; ಕೋಟೆ ವೀರಭದ್ರೇಶ್ವರ ಯುವಕ ಮಂಡಳ ಎ ತಂಡ ಪ್ರಥಮ ಹಾಗೂ ಕೋಟೆ ವೀರಭದ್ರೇಶ್ವರ ಯುವಕ ಮಂಡಳ ಬಿ ತಂಡ ದ್ವಿತೀಯ ಸ್ಥಾನ ಪಡೆದವು.ವೈದ್ಯಕೀಯ ಸಂಸ್ಥೆಗಳಿಗೆ ಸೂಚನೆಗದಗ: ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಕ್ರಿಯೆ ಮಾ.2ರಂದು ಪೂರ್ಣಗೊಳ್ಳಲಿದ್ದು, ಕಡ್ಡಾಯವಾಗಿ ನೋಂದಣಿ ಮಾಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ನೋಂದಣಿಯಾಗಿರುವ ಸಂಸ್ಥೆಗಳಲ್ಲಿನ ನ್ಯೂನತೆ ಹಾಗೂ ವಿದ್ಯಾರ್ಹತೆ ಇಲ್ಲದವರು ಸಂಸ್ಥೆ ನಡೆಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದೆ. ಅನಧಿಕೃತ ಮತ್ತು ಕ್ರಮಬದ್ಧವಲ್ಲದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry