ದುಷ್ಕರ್ಮಿಗಳಿಂದ ಚಿಂದಿ ಆಯುವ ವ್ಯಕ್ತಿ ಕೊಲೆ

ಗುರುವಾರ , ಜೂಲೈ 18, 2019
28 °C

ದುಷ್ಕರ್ಮಿಗಳಿಂದ ಚಿಂದಿ ಆಯುವ ವ್ಯಕ್ತಿ ಕೊಲೆ

Published:
Updated:

ಬೆಂಗಳೂರು: ದುಷ್ಕರ್ಮಿಗಳು ರಾಜು (27) ಎಂಬುವರ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಕಮರ್ಷಿಯಲ್‌ಸ್ಟ್ರೀಟ್‌ನ ತೊಪ್ಪಮೊದಲಿಯಾರ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ರಾಜು ಅವರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಪರಿಚಿತರೇ ಆದ ರಿಚರ್ಡ್ ಮತ್ತು ಸ್ಟೆಫಿ ಎಂಬುವರ ಜತೆ ರಾಜು ಅವರು ರಾತ್ರಿ ಜಗಳವಾಡಿದ್ದರು. ಆ ನಂತರ ರಸ್ತೆ ಬದಿ ಮಲಗಿದ್ದ ರಾಜು ಅವರ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಪೊಲೀಸರು

ತಿಳಿಸಿದ್ದಾರೆ.ಆರೋಪಿಗಳು ಸಹ ಚಿಂದಿ ಆಯುವವರು ಮತ್ತು ಪ್ರತಿ ದಿನ ರಸ್ತೆ ಬದಿಯಲ್ಲಿಯೇ ಮಲಗುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅವರ  ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಮರ್ಷಿಯಲ್‌ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದರೋಡೆ

ಉದ್ಯಮಿ ರಿಪೆನ್ ಎಂಬುವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಬೈಕ್ ದರೋಡೆ ಮಾಡಿರುವ ಘಟನೆ ಭಾರತಿನಗರದ ಸಮೀಪದ ಕೋಲ್ಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ವಿದ್ಯಾರಣ್ಯಪುರ ನಿವಾಸಿಯಾದ ರಿಪೇನ್ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಭಾರತಿನಗರಕ್ಕೆ ಬಂದಿದ್ದರು.ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಇಬ್ಬರು ಕಿಡಿಗೇಡಿಗಳು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಬೈಕ್ ದೋಚಿದ್ದಾರೆ. ಬೈಕ್‌ನ ಬೆಲೆ ಸುಮಾರು 35 ಸಾವಿರ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry