ದುಷ್ಕರ್ಮಿಗಳ ಗುಂಡಿಗೆ 20 ಬಲಿ

7

ದುಷ್ಕರ್ಮಿಗಳ ಗುಂಡಿಗೆ 20 ಬಲಿ

Published:
Updated:

ಅಬುಜಾ (ಪಿಟಿಐ): ಮಸೀದಿಯೊಂದರಿಂದ ಹೊರಬರುತ್ತಿದ್ದ ಜನರ ಮೇಲೆ ಬಂದೂಕುಧಾರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ 20 ಜನರನ್ನು ಹತ್ಯೆ ಮಾಡಿರುವ ಘಟನೆ ಉತ್ತರ ನೈಜೀರಿಯಾದ ಕಡುನಾ ರಾಜ್ಯದಲ್ಲಿ ಭಾನುವಾರ ನಡೆದಿದೆ.ಡೊಗೊ ಡವಾ ಎಂಬ ಕುಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದೆ. ಸ್ಥಳೀಯ ಅಪರಾಧ ತಂಡಕ್ಕ ಸೇರಿದವರು ಈ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.ಧಾರ್ಮಿಕವಾಗಿ ಒಡೆದು ಹೋಗಿರುವ ಕಡುನಾ ರಾಜ್ಯವು ಇತ್ತೀಚೆಗೆ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry