ದುಷ್ಟ ಬೀಳ್ಕೊಡುಗೆ

7

ದುಷ್ಟ ಬೀಳ್ಕೊಡುಗೆ

Published:
Updated:

‘ದುಷ್ಟ’ ಚಿತ್ರೀಕರಣ ಭಾಗಶಃ ಪೂರ್ಣಗೊಂಡಿದೆ. ನಾಯಕ ಪಂಕಜ್ ಹಾಗೂ ನಾಯಕಿ ಸುರಭಿ ಭದ್ರಾವತಿಯಲ್ಲಿ ಹಾಡಿಗೆ ಹೆಜ್ಜೆ ಹಾಕಿದರು. ಇದೇ ಸಂದರ್ಭದಲ್ಲಿ ಈ ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ಹೊಸ ಕಲಾವಿದರ ತಂಡ ಚಿತ್ರದ ನಿರ್ದೇಶಕ ಎಸ್. ನಾರಾಯಣ ಅವರನ್ನು ಭದ್ರಾವತಿಯ ಭಾಗ್ಯವತಿ ಚಿತ್ರಮಂದಿರದಲ್ಲಿ ಬೀಳ್ಕೊಟ್ಟಿತು.ಹುಬ್ಬಳ್ಳಿಯ ವೀರೇಶ್, ಉದಯ್, ಅಜಯ್, ಚಂದ್ರಶೇಖರ್, ಮಾಸ್ಟರ್ ಪವನ್, ಪಾರ್ವತಿ ವೆಂಕಟೇಶ್, ಶಶಿಕಲಾ, ಲಕ್ಷ್ಮಣ್, ಶಿವರಾಜ್, ಕೆ.ಎಸ್. ರವಿಕುಮಾರ್, ಕೆ. ರವೀಂದ್ರನಾಥ್, ಜಯಶ್ರೀ, ಗಣೇಶ್ ಇತರರು 40ಕ್ಕೂ ಹೆಚ್ಚು ದಿನ ಪ್ರಥಮ ಬಾರಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸವಿನೆನಪಿಗಾಗಿ ಈ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಕಲಾವಿದರ ಭಾವಪೂರ್ಣ ಸನ್ಮಾನ ಹಾಗೂ ಗೌರವಕ್ಕೆ ನಾರಾಯಣ್ ಮೂಕವಿಸ್ಮಿತರಾದರು. ‘ದುಷ್ಟ’ ಚಿತ್ರತಂಡ ಉಳಿದ ಒಂದು ಹಾಡಿಗಾಗಿ ಸಂಡೂರು ತಲುಪಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry