ಗುರುವಾರ , ಆಗಸ್ಟ್ 22, 2019
21 °C

ದೂರವಾಣಿ ಗ್ರಾಹಕ ಸಂಖ್ಯೆ ಅಲ್ಪ ಹೆಚ್ಚಳ: ಟ್ರಾಯ್

Published:
Updated:

ನವದೆಹಲಿ(ಐಎಎನ್‌ಎಸ್): ಕಳೆದ ಡಿಸೆಂಬರ್‌ನಲ್ಲಿ 89.55 ಕೋಟಿಯಷ್ಟಿದ್ದ ದೇಶದ ಒಟ್ಟಾರೆ ದೂರವಾಣಿ ಗ್ರಾಹಕರ ಸಂಖ್ಯೆ 2013ರ ಮಾರ್ಚ್ ವೇಳೆಗೆ 89.80 ಕೋಟಿಗೆ ಮುಟ್ಟಿದೆ. ಅಂದರೆ ಶೇ 0.28ರಷ್ಟು ಅಲ್ಪ ಪ್ರಮಾಣದ ಹೆಚ್ಚಳವಾಗಿದೆ.

  ನಗರ ಪ್ರದೇಶದಲ್ಲಿನ ಚಂದಾದಾರರ ಸಂಖ್ಯೆ ಮಾತ್ರ ಇಳಿಕೆಯಾಗಿದೆ. ಡಿಸೆಂಬರ್‌ನಲ್ಲಿ 55.69 ಕೋಟಿಯಷ್ಟಿದ್ದ ನಗರ ಪ್ರದೇಶದ ಗ್ರಾಹಕರ ಸಂಖ್ಯೆ 2013ರ ಮಾರ್ಚ್ ವೇಳೆಗೆ 54.88 ಕೋಟಿಗೆ ಇಳಿಕೆಯಾಗಿದೆ ಎಂದು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ(ಟಿಆರ್‌ಎಐ) ಗುರುವಾರ ಹೇಳಿದೆ.

Post Comments (+)