ಗುರುವಾರ , ಆಗಸ್ಟ್ 22, 2019
27 °C

ದೂರವಾಣಿ ಜಾಲ ಭದ್ರತೆಗೆ `ಟಿಎಸ್‌ಡಿ'

Published:
Updated:

ನವದೆಹಲಿ(ಪಿಟಿಐ): ದೂರವಾಣಿ ಜಾಲ ವ್ಯವಸ್ಥೆ ಮೇಲೆ ಹ್ಯಾಕರ್‌ಗಳ ಕಣ್ಣು ಬಿದ್ದಿರುವ ಹಿನ್ನೆಲೆಯಲ್ಲಿ, `ದೂರಸಂಪರ್ಕ ಭದ್ರತಾ ಮಹಾ ನಿರ್ದೇಶನಾಲಯ'(ಟಿಎಸ್‌ಡಿ) ಸ್ಥಾಪಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.ದೂರವಾಣಿ ಇಲಾಖೆ (ಡಿಒಟಿ) ಇದಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಿದ್ದು, `ಟಿಎಸ್‌ಡಿ' ಸದ್ಯದ ತುರ್ತು ಅಗತ್ಯ ಎಂದು ವಿವರಿಸಿದೆ.ದೂರವಾಣಿ ಇಲಾಖೆಯ ಗುಪ್ತಚರ ಘಟಕ, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ, ದೂರಸಂಪರ್ಕ ಜಾರಿ ಮತ್ತು ನಿಗಾ ಸಂಸ್ಥೆ, ರಾಷ್ಟ್ರೀಯ ಭದ್ರತಾ ಮಂಡಳಿ, ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಈಗಾಗಲೇ ದೂರಸಂಪರ್ಕ ಜಾಲ ಭದ್ರತೆ ಬಗ್ಗೆ ನಿಗಾ ವಹಿಸುತ್ತಿವೆ.

Post Comments (+)