ಸೋಮವಾರ, ನವೆಂಬರ್ 18, 2019
20 °C

`ದೂರಸಂಪರ್ಕ ಪರಿಕರ ರಫ್ತು ರೂ.22,000 ಕೋಟಿ'

Published:
Updated:

ನವದೆಹಲಿ(ಪಿಟಿಐ): ದೇಶದ ದೂರಸಂಪರ್ಕ ಪರಿಕರ ತಯಾರಿಕೆ ಉದ್ಯಮ 2012-13ನೇ ಹಣಕಾಸು ವರ್ಷದಲ್ಲಿ ಡಿಸೆಂಬರ್ 31ರ ವೇಳೆಗೆ ರೂ.16,350 ಕೋಟಿ ಮೌಲ್ಯದ ಸರಕು ರಫ್ತು ಮಾಡಿದ್ದು, ಒಟ್ಟು ಹಣಕಾಸು ವರ್ಷದಲ್ಲಿ ರೂ.22,000 ಕೋಟಿಗೆ ಮುಟ್ಟಿರುವ ಅಂದಾಜಿದೆ ಎಂದು `ದೂರಸಂಪರ್ಕ ಪರಿಕರ ಮತ್ತು ಸೇವೆಗಳ ರಫ್ತು ಉತ್ತೇಜನ ಸಮಿತಿ'(ಟಿಇಪಿಸಿ) ಹೇಳಿದೆ.ರಫ್ತು ಆಗಿರುವ ದೂರಸಂಪರ್ಕ ಸಾಧನಗಳಲ್ಲಿ ಶೇ 50ರಷ್ಟು ಹ್ಯಾಂಡ್‌ಸೆಟ್‌ಗಳೇ ಆಗಿವೆ ಎಂದು `ಟಿಇಪಿಸಿ' ಕಾರ್ಯದರ್ಶಿ ಆರ್.ಕೆ.ಪಾಠಕ್ ಗುರುವಾರ ಇಲ್ಲಿ ಕಾರ್ಯಕ್ರಮವೊಂದರ ವೇಳೆ ಸುದ್ದಿಗಾರರಿಗೆ ತಿಳಿಸಿದರು.ಮುಂದಿನ ಜೂನ್ 18ರಿಂದ 21ರವರೆಗೆ ಸಿಂಗಪುರದಲ್ಲಿ `ಕಮ್ಯುನಿಕ್ ಏಷ್ಯಾ-2013' ಸಮಾವೇಶ ನಡೆಯಲಿದ್ದು, ದೇಶದ ದೂರಸಂಪರ್ಕ ಕ್ಷೇತ್ರದ ಕೆಲವು ಉದ್ಯಮಗಳ ಪ್ರತಿನಿಧಿಗಳನ್ನು ಕರೆದೊಯ್ಯಲಾಗುವುದು ಎಂದರು.

ಪ್ರತಿಕ್ರಿಯಿಸಿ (+)