ಶುಕ್ರವಾರ, ನವೆಂಬರ್ 22, 2019
22 °C
ಅಕ್ರಮ ಮದ್ಯ ಮಾರಾಟ, ದಾಸ್ತಾನು

ದೂರು ಸ್ವೀಕರಿಸಲು ಕಂಟ್ರೋಲ್ ರೂಂ ಸ್ಥಾಪನೆ

Published:
Updated:

ಚಾಮರಾಜನಗರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿ ಅಕ್ರಮ ಮದ್ಯ ಮಾರಾಟ, ದಾಸ್ತಾನು ಹಾಗೂ ಸಾಗಾಣಿಕೆ ಕುರಿತ ದೂರು ಸ್ವೀಕರಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅಬಕಾರಿ ಇಲಾಖೆಯು ಕಂಟ್ರೋಲ್ ರೂಂ ತೆರೆದಿದೆ.ನಗರದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಜಿಲ್ಲಾಮಟ್ಟದ ಕಂಟ್ರೋಲ್ ರೂಂ (ದೂ.ಸಂ. 08226-224776) ಸ್ಥಾಪಿಸಲಾಗಿದೆ. ಅಬಕಾರಿ ಉಪ ಆಯುಕ್ತ ಬಿ. ಮಾದೇಶ್ (ಮೊಬೈಲ್ 94495 97179), ಉಪ ಅಧೀಕ್ಷಕ ಎಂ.ಎನ್. ನಟರಾಜು (ಮೊಬೈಲ್ 87100 74441) ಮೇಲುಸ್ತುವಾರಿ ವಹಿಸಲಿದ್ದಾರೆ.ಚಾಮರಾಜನಗರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಕಚೇರಿಯಲ್ಲಿಯೂ ಕಂಟ್ರೋಲ್ ರೂಂ (ದೂ.ಸಂ. 08226-224892) ತೆರೆಯಲಾಗಿದ್ದು, ಅಬಕಾರಿ ಉಪ ಅಧೀಕ್ಷಕ ಎಸ್. ನಾಗರಾಜಪ್ಪ (ಮೊಬೈಲ್ 94495 97186) ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ ಕಂಟ್ರೋಲ್ ರೂಂ (ದೂ.ಸಂ. 08226-223821) ಅನ್ನು ಚಾಮರಾಜನಗರ ವಲಯದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ತೆರೆಯಲಾಗಿದೆ. ಅಬಕಾರಿ ನಿರೀಕ್ಷಕ ಚೆಲುವರಾಜು (ಮೊಬೈಲ್ 94824 08373) ಕಂಟ್ರೋಲ್ ರೂಂನ ಮೇಲುಸ್ತುವಾರಿ ವಹಿಸಲಿದ್ದಾರೆ.ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಗೆ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಕಂಟ್ರೋಲ್ ರೂಂ (ದೂ.ಸಂ. 08224-252433) ಕಾರ್ಯ ನಿರ್ವಹಿಸಲಿದೆ. ಅಬಕಾರಿ ನಿರೀಕ್ಷಕ ವೈ.ಡಿ. ಸೂರ್ಯನಾರಾಯಣ (ಮೊಬೈಲ್ 94495 97187) ಉಸ್ತುವಾರಿವಹಿಸುವರು.ಗುಂಡ್ಲುಪೇಟೆ ತಾಲ್ಲೂಕಿನ ಕಂಟ್ರೋಲ್ ರೂಂ (ದೂ.ಸಂ. 08223-223289) ಗುಂಡ್ಲುಪೇಟೆ ವಲಯದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಅಬಕಾರಿ ನಿರೀಕ್ಷಕಿ ಯು.ವಿ. ಗೀತಾ (ಮೊಬೈಲ್ 94486 97519) ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.ಜಿಲ್ಲೆಯಲ್ಲಿ ಯಾವುದೇ ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ, ತಯಾರಿಕೆ, ದಾಸ್ತಾನು ಮಾಡಿರುವುದು ಕಂಡುಬಂದರೆ ನಾಗರಿಕರು ಕಂಟ್ರೋಲ್ ರೂಂ ಅಥವಾ ಮೇಲುಸ್ತುವಾರಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಬೇಕು ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ಕೋರಿದ್ದಾರೆ.ಏ. 22ಕ್ಕೆ ಮತದಾರರ ಜಾಗೃತಿಗೆ ಕಿರುಚಿತ್ರ ಪ್ರದರ್ಶನ

ಚಾಮರಾಜನಗರ: ಮತದಾರರ ಜಾಗೃತಿ ಅಭಿಯಾನ ಸಮಿತಿಯಿಂದ ಏ. 22ರಿಂದ 26ರವರೆಗೆ ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ

ಮತದಾನವಾಗಿರುವ ತಾಲ್ಲೂಕಿನ ಮತಗಟ್ಟೆಗಳ ವ್ಯಾಪ್ತಿ ಮತ ಚಲಾವಣೆಯ ಜಾಗೃತಿ ಕುರಿತು ಕಿರುಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಪಂಚಾಯಿತಿಯ ನೈರ್ಮಲ್ಯ ವಾಹಿನಿ ಹಾಗೂ ವಾರ್ತಾ ಇಲಾಖೆಯ ಪ್ರಚಾರ ವಾಹನಗಳ ಮೂಲಕ ಕಡ್ಡಾಯ ಮತದಾನದ ಮಹತ್ವ ಕುರಿತ ಕಿರುಚಿತ್ರ ಪ್ರದರ್ಶಿಸಲಾಗುತ್ತದೆ. ಏ. 22ರಂದು ಸಂಜೆ 7ಗಂಟೆಗೆ ನಗರದ ಕರಿನಂಜನಪುರ ಬಡಾವಣೆಯ ಬಸವೇಶ್ವರ ದೇವಸ್ಥಾನ ಹಾಗೂ ವೆಂಕಟಯ್ಯನಛತ್ರದ ಚಿಕ್ಕಮೋಳೆಯ ಸರ್ಕಾರಿ ಶಾಲೆ ಮುಂಭಾಗದಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ರಾತ್ರಿ 8ಗಂಟೆಗೆ ನಗರದ ಪಿಬ್ಲ್ಯುಡಿ ಕಾಲೊನಿಯ ಉದ್ಯಾನದ ಬಳಿ ಹಾಗೂ ದೊಡ್ಡಮೋಳೆಯ ಬ್ಯಾಡಮೂಡ್ಲು ಗ್ರಾಮದ ಬಸ್‌ನಿಲ್ದಾಣದ ಬಳಿ ಚಿತ್ರ ಪ್ರದರ್ಶನ ನಡೆಯಲಿದೆ. ರಾತ್ರಿ 9 ಗಂಟೆಗೆ ಸೋಮವಾರಪೇಟೆಯ ಸರ್ಕಾರಿ ಶಾಲೆ ಬಳಿ ಚಿತ್ರ ಪ್ರದರ್ಶನಕ್ಕೆ ಏರ್ಪಾಡು ಮಾಡಲಾಗಿದೆ.ಏ. 23ರಂದು ಸಂಜೆ 7 ಗಂಟೆಗೆ ರಾಮಸಮುದ್ರದ ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆಯ ದೊಡ್ಡಬೀದಿಯ ಬಾಗೇಮರದ ಹತ್ತಿರ ಪ್ರದರ್ಶನ ನಡೆಯಲಿದೆ. ಅಟ್ಟುಗುಳಿಪುರ ಗ್ರಾಮದ ಹಾಲಿನ ಡೇರಿ ಬಳಿ ಚಿತ್ರ ಪ್ರದರ್ಶನ ನಡೆಯಲಿದೆ.ರಾತ್ರಿ 8ಗಂಟೆಗೆ ಪಟ್ಟಣದ ಕುರುಬರ ಬೀದಿ ಹಾಗೂ ಆದಿಜಾಂಬವರ ಬೀದಿ ಹಾಗೂ ವೆಂಕಟಯ್ಯನಛತ್ರದ ವ್ಯಾಪ್ತಿಯ ಬಸವಾಪುರದ ಅಂಬೇಡ್ಕರ್ ಭವನದ ಬಳಿ ಚಿತ್ರ ಪ್ರದರ್ಶನ ನಡೆಯಲಿದೆ. ರಾತ್ರಿ 9ಗಂಟೆಗೆ ಹರದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಿಗೆರೆಯ ಕಾಳಮ್ಮ ದೇವಾಲಯದ ಬಳಿ ಚಿತ್ರ ಪ್ರದರ್ಶನವಿದೆ.ಏ. 24ರಂದು ಸಂಜೆ 7ಗಂಟೆಗೆ ನಗರದ ಅಂಬೇಡ್ಕರ್ ಬಡಾವಣೆಯ ರಾಮಮಂದಿರ ಹಾಗೂ ಮಾದಾಪುರ ಗ್ರಾಮ ಪಂಚಾಯಿತಿಯ ಹಂಡ್ರಕಳ್ಳಿ ಮೋಳೆಯ ಚಾವಡಿ ಬಳಿ ಚಿತ್ರ ಪ್ರದರ್ಶನ ನಡೆಯಲಿದೆ. ರಾತ್ರಿ 8ಗಂಟೆಗೆ ನಗರದ ಗಾಳಿಪುರದ ಸರ್ಕಾರಿ ಶಾಲೆ ಬಳಿ ಹಾಗೂ ಮಂಗಲ ಗ್ರಾಮ ಪಂಚಾಯಿತಿಯ ಯಡಿಯೂರಿನ ಅರಳಿ ಮರದ ಬಳಿ ಚಿತ್ರ ಪ್ರದರ್ಶನಗೊಳ್ಳಲಿದೆ. ರಾತ್ರಿ 9ಗಂಟೆಗೆ ನಗರದ ಭುಜಂಗೇಶ್ವರ ಬಡಾವಣೆಯ ಭಾಗ್ಯಾ ಹೋಟೆಲ್ ಬಳಿ ಚಿತ್ರ ಪ್ರದರ್ಶಿಸಲಾಗುವುದು.ಏ. 25ರಂದು ಸಂಜೆ 7ಗಂಟೆಗೆ ಆಲೂರಿನ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ, ಚಂದಕವಾಡಿ ಗ್ರಾಮ ಪಂಚಾಯಿತಿಯ ಕೋಡಿಮೋಳೆ ಬಸ್‌ನಿಲ್ದಾಣ, ರಾತ್ರಿ 8ಗಂಟೆಗೆ ಕೂಡ್ಲೂರು ಗ್ರಾಮ ಪಂಚಾಯಿತಿಯ ದೊಡ್ಡರಾಯಪೇಟೆ ಬಸ್‌ನಿಲ್ದಾಣ, ಚಂದಕವಾಡಿ ಬಸ್‌ನಿಲ್ದಾಣ ಹಾಗೂ ರಾತ್ರಿ 9ಗಂಟೆಗೆ ಅಯ್ಯನಪುರ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ಚಿತ್ರ ಪ್ರದರ್ಶನ ನಡೆಯಲಿದೆ.ಏ. 26ರಂದು ಸಂಜೆ 7ಗಂಟೆಗೆ ಕಾಗಲವಾಡಿಯ ದೇವಾಲಯದ ಬಳಿ, ಅರಕಲವಾಡಿ ಗ್ರಾಮ ಪಂಚಾಯಿತಿಯ ಯಾನಗಳ್ಳಿ ಬಸ್‌ನಿಲ್ದಾಣದ ಬಳಿ ಪ್ರರ್ದಶನವಿದೆ. ರಾತ್ರಿ 8ಗಂಟೆಗೆ ಕಾಗಲವಾಡಿ ಮೋಳೆ, ಕೊತ್ತಲವಾಡಿಯ ಮಾರಿಗುಡಿ ಬಳಿ ಹಾಗೂ ರಾತ್ರಿ 9ಗಂಟೆಗೆ ನಾಗವಳ್ಳಿಯ ಬಸ್‌ನಿಲ್ದಾಣದ ಬಳಿ ಮತದಾರರ ಜಾಗೃತಿ ಕುರಿತ ಕಿರುಚಿತ್ರ ಪ್ರದರ್ಶನ ನಡೆಯಲಿದೆ ಎಂದು ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಜೈಕೃಷ್ಣ ತಿಳಿಸಿದ್ದಾರೆ.ಎಸ್‌ಎಂಎಸ್‌ಗೆ ಅನುಮತಿ ಕಡ್ಡಾಯ

ಚಾಮರಾಜನಗರ: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸುವಂತೆ ಅಭ್ಯರ್ಥಿಗಳು ಕೋರಿ  ಮತದಾರರಿಗೆ ಕಳುಹಿಸುವ ಬಲ್ಕ್ ಎಸ್‌ಎಂಎಸ್‌ಗಳಿಗೆ ಜಿಲ್ಲಾಮಟ್ಟದ ಮಾಧ್ಯಮ ದೃಢೀಕರಣ ಹಾಗೂ ಉಸ್ತುವಾರಿ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.ಅಭ್ಯರ್ಥಿಗಳು ತಮ್ಮ ಪರ ಮತ ಚಲಾಯಿಸುವಂತೆ ಮನವಿ ಮಾಡಿ ಕಳುಹಿಸುವ ಎಸ್‌ಎಂಎಸ್ ಸಹ ಜಾಹೀರಾತು ರೂಪವಾಗಿದೆ. ಈ ಹಿನ್ನೆಲೆಯಲ್ಲಿ ಅನುಮತಿ ಪಡೆಯದೆ ಎಸ್‌ಎಂಎಸ್ ಕಳುಹಿಸುವುದನ್ನು ಉಲ್ಲಂಘನೆ ಎಂದು ಪರಿಗಣಿಸಿ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 127ರ ಅನ್ವಯ ಚುನಾವಣಾ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿ ಕ್ರಮ   ಕೈಗೊಳ್ಳಲಿದ್ದಾರೆ.ಅಭ್ಯರ್ಥಿಗಳು ಮತ ಚಲಾಯಿಸುವಂತೆ ಕೋರಿ ಕಳುಹಿಸುವ ಎಸ್‌ಎಂಎಸ್ ವಾಯ್ಸ ಮೆಸೇಜ್ ಅಥವಾ ಕಾಲರ್ ರಿಂಗ್ ಟೋನ್‌ಗಳ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಪರಿಗಣಿಸಲಾಗುವುದು.ಚುನಾವಣಾ ಸಂಬಂಧ ಎಸ್‌ಎಂಎಸ್ ಕಳುಹಿಸಲು ದೂರವಾಣಿ ಕಂಪೆನಿ ಅಥವಾ ಸೇವಾ ಒದಗಿಸುವವರು, ಡೀಲರ್‌ಗಳೊಂದಿಗೆ ಅಭ್ಯರ್ಥಿಗಳು ಮಾಡಿಕೊಂಡಿರುವ ಒಪ್ಪಂದ, ಇನ್‌ವಾಯ್ಸ ಮತ್ತು ಇತರೇ ಪಾವತಿ ದಾಖಲೆ ಒದಗಿಸಬೇಕು.ಮಾಧ್ಯಮ ದೃಢೀಕರಣ ಮತ್ತು ಉಸ್ತುವಾರಿ ಸಮಿತಿಯು ಅನುಮತಿ ಸಂಬಂಧ ದಾಖಲೆ ಪರಿಶೀಲಿಸಲಿದೆ.ಚುನಾವಣಾ ಸಂಬಂಧ ಎಸ್‌ಎಂಎಸ್ ಸೇವೆ ಒದಗಿಸುವವರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ವರದಿ ನೀಡಬೇಕು. ಇಲ್ಲವಾದರೆ ಚುನಾವಣಾಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರತಿಕ್ರಿಯಿಸಿ (+)