ದೃಷ್ಟಿದೋಷ: ಯಶಸ್ವಿ ಶಸ್ತ್ರಚಿಕಿತ್ಸೆ

7

ದೃಷ್ಟಿದೋಷ: ಯಶಸ್ವಿ ಶಸ್ತ್ರಚಿಕಿತ್ಸೆ

Published:
Updated:

ಹೊಸಕೋಟೆ: ಹುಟ್ಟಿನಿಂದಲೇ ದೃಷ್ಟಿ ದೋಷದಿಂದ ತೊಂದರೆ ಅನುಭವಿಸುತ್ತಿದ್ದ 3 ವರ್ಷದ ಬಾಲಕನಿಗೆ ಇಲ್ಲಿನ ಜಿಇಎಫ್ ಆಸ್ಪತ್ರೆಯಲ್ಲಿ ಯಶಸ್ವೀ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ.ತಾಲ್ಲೂಕಿನ ಶಿವನಾಪುರ ಗ್ರಾಮದ ಕೂಲಿ ಕಾರ್ಮಿಕ ಮುನಿರಾಜುರ ಮಗ ಮಣಿ ಹುಟ್ಟಿನಿಂದ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದ. ಬಡತನದಿಂದ ಮುನಿರಾಜು ತಮ್ಮ ಮಗನಿಗೆ ಹಲವು ವೈದ್ಯರ ಬಳಿ ಔಷಧಿ ಚಿಕಿತ್ಸೆ ಕೊಡಿಸಿದ್ದರೂ ಪ್ರಯೋಜನವಾಗಿರಲಿಲ್ಲ.ಜಿಇಎಫ್ ಆಸ್ಪತ್ರೆಗೆ ತಂದಾಗ ಮಣಿಗೆ ಹುಟ್ಟಿನಿಂದಕಣ್ಣಿನ ಪೊರೆ ದೃಢಪಟ್ಟಿತು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಆಸ್ಪತ್ರೆಯ ಮುಖ್ಯಸ್ಥ ಡಾ.ಸುಂದರರಾಮಶೆಟ್ಟಿ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry