ದೆಹಲಿಯಲ್ಲಿ ಭಾರಿ ಮಳೆ: ಬಾಲಕಿ ಸಾವು

ಭಾನುವಾರ, ಮೇ 26, 2019
30 °C

ದೆಹಲಿಯಲ್ಲಿ ಭಾರಿ ಮಳೆ: ಬಾಲಕಿ ಸಾವು

Published:
Updated:

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಶುಕ್ರವಾರ ಭಾರಿ ಮಳೆ  ಸುರಿದ ಪರಿಣಾಮ ರಸ್ತೆಗಳು ಜಲಾವೃತವಾದವು. ಆಸ್ಪತ್ರೆಯೊಂದರ ಗೋಡೆ ಕುಸಿದು ಬಾಲಕಿಯೊಬ್ಬಳು ಮೃತಪಟ್ಟಳು.ನಸುಕಿನಿಂದಲೇ ಆರಂಭವಾದ ಮಳೆ ರಸ್ತೆಗಳಲ್ಲಿ ಸಣ್ಣ `ಪ್ರವಾಹ~ಗಳನ್ನೇ ಸೃಷ್ಟಿಸಿತು. ಮುಂಜಾನೆ 4 ಮತ್ತು ಮಧ್ಯಾಹ್ನ 12ರ ನಡುವಿನ ಅವಧಿಯಲ್ಲಿ 91.1 ಮಿಮಿ ಮಳೆ ದಾಖಲಾಗಿತ್ತು.ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮಳೆ ನೀರು ರಸ್ತೆಗಳ ಮೇಲೇ ಹರಿದು ರಸ್ತೆಗಳು ಜಲಾವೃತವಾಯಿತು. ಕೆಲವು ಪ್ರದೇಶಗಳಲ್ಲಿ ಗಾಳಿ, ಮಳೆಗೆ ಮರಗಳು ಧರೆಗುರುಳಿದವು. ವಾಹನ ಸಂಚಾರವಂತೂ ದಿಕ್ಕಾ ಪಾಲಾಯಿತು.ದಿನದ ಕನಿಷ್ಠ ಉಷ್ಣಾಂಶ 25.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಮಳೆಯಿಂದಾಗಿ ದೆಹಲಿ ನಿವಾಸಿಗಳಿಗೆ ಸೂರ್ಯನ ದರ್ಶನ ಆಗಲೇ ಇಲ್ಲ.ಭಾರಿ ಮಳೆಯಿಂದಾಗಿ ಗೌತಮ್ ಕಾಲೊನಿಯ ಎಂಸಿಡಿ ಆಸ್ಪತ್ರೆಯ ಸುತ್ತಲಿನ ಗೋಡೆ ಕುಸಿಯಿತು. ಇದರಡಿ ಸಿಲುಕಿದ ಬಾಲಕಿಯೊಬ್ಬಳು ಮೃತಪಟ್ಟಳು.ಅನೇಕ ಪ್ರದೇಶಗಳಲ್ಲಿ ವಾಹನಗಳು ನೀರಿನ ನಡುವೆಯೇ ಮುನ್ನುಗ್ಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ವಾಹನ ಸವಾರರು ಸಮೀಪದ ಮೆಟ್ರೊ ನಿಲ್ದಾಣದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ ರೈಲಿನಲ್ಲಿ ಸಂಚರಿಸಿ ಮನೆ ಸೇರಿಕೊಂಡರು.ಧಾರಾಕಾರ ಮಳೆ ಕಾರಣ ರೈಲು ಸಂಚಾರವೂ ಅಸ್ತವ್ಯಸ್ತವಾಯಿತು. ದೆಹಲಿ ವಿಭಾಗದಲ್ಲಿ ಸುಮಾರು 40 ರೈಲುಗಳ ಸಂಚಾರ ವ್ಯತ್ಯಯಗೊಂಡು  ಪ್ರಯಾಣಿಕರು ಪರದಾಡಬೇಕಾಯಿತು.ಹಳೆಯ ದೆಹಲಿ ನಿಲ್ದಾಣದಲ್ಲಿ ನೀರು ತುಂಬಿಕೊಂಡು ತೊಂದರೆಯಾಯಿತು. ಮೂರು ರೈಲುಗಳ ಸಂಚಾರ ರದ್ದುಪಡಿಸಲಾಯಿತು ಮತ್ತು ಸುಮಾರು 39 ರೈಲುಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry