ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ

ಶುಕ್ರವಾರ, ಜೂಲೈ 19, 2019
28 °C

ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ

Published:
Updated:

ನವದೆಹಲಿ (ಪಿಟಿಐ): ಮಹಿಳೆ ಮೇಲೆ ಆಕೆಯ ಕಚೇರಿಯ ಸಹೋದ್ಯೋಗಿಗಳೇ ಅತ್ಯಾಚಾರ ನಡೆಸಿರುವ ಘಟನೆ ಗುರುವಾರ ಇಲ್ಲಿ ನಡೆದಿದೆ.`ಕಾರಿನಲ್ಲಿ ಬಿಡುವುದಾಗಿ ಹೇಳಿ ಕಚೇರಿಯ ಇಬ್ಬರು ಅಧಿಕಾರಿಗಳು ನನ್ನನ್ನು ಕಾರಿನ ಒಳಗಡೆ ಕರೆದುಕೊಂಡಿದ್ದಾರೆ. ದಾರಿ ಮಧ್ಯೆ ಮತ್ತು ಬರುವ ತಂಪು ಪಾನೀಯ ಕುಡಿಸಿ ಬಳಿಕ ಅತ್ಯಾಚಾರ ನಡೆಸಿದ್ದಾರೆ' ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.ಅತ್ಯಾಚಾರಕ್ಕೆ ಒಳಗಾದ ಮಹಿಳೆ ದೆಹಲಿಯ ದಿಲ್‌ಶದ್ ಉದ್ಯಾನ ಪ್ರದೇಶದಲ್ಲಿ ಬುಧವಾರ ರಾತ್ರಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಅತ್ಯಾಚಾರ ನಡೆದಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry