ದೆಹಲಿ: ಈರುಳ್ಳಿ ಮತ್ತೆ ರೂ 70ಕ್ಕೆ

7

ದೆಹಲಿ: ಈರುಳ್ಳಿ ಮತ್ತೆ ರೂ 70ಕ್ಕೆ

Published:
Updated:

ನವದೆಹಲಿ(ಪಿಟಿಐ): ಈರುಳ್ಳಿ ಧಾರಣೆ ನವದೆಹಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ರೂ10ರಷ್ಟು ಏರಿಕೆ ಕಾಣುವ ಮೂಲಕ ಕೆ.ಜಿಗೆ ಮತ್ತೆ ರೂ70ರ ಮಟ್ಟ ಮುಟ್ಟಿದೆ.ಕಳೆದೊಂದು ವಾರದಿಂದ ಈರುಳ್ಳಿ ಆವಕ ತಗ್ಗಿದೆ. ಹಾಗಾಗಿ ಸಗಟು ಮಾರುಕಟ್ಟೆಯಲ್ಲಿಯೇ ಸದ್ಯ ಈರುಳ್ಳಿ ಬೆಲೆ ಕೆ.ಜಿಗೆ ರೂ60ರಷ್ಟಿದೆ. ಚಿಲ್ಲರೆ ವಹಿವಾಟಿನಲ್ಲಿ ಮತ್ತು ಬೀದಿಗಳಲ್ಲಿನ ಮಾರಾಟಗಾರರು ಕೆ.ಜಿ.ಗೆ ರೂ70ರಿಂದ ರೂ80ರವರೆಗೂ ಮಾರಾಟ ಮಾಡುತ್ತಿದ್ದಾರೆ ಎಂದು ಸಗಟು ವರ್ತಕರು ಮಂಗಳವಾರ ತಿಳಿಸಿದ್ದಾರೆ.ಬೆಂಗಳೂರು ಸಗಟು

ಬೆಂಗಳೂರಿನ ಸಗಟು ಮಾರುಕಟ್ಟೆ ಯಲ್ಲಿ ದಪ್ಪ ಗಾತ್ರದ ಈರುಳ್ಳಿ ಕ್ವಿಂಟಲ್‌ಗೆ ಕನಿಷ್ಠ ರೂ5000ದಿಂದ 5600ರಷ್ಟಿದ್ದರೆ, ಮಧ್ಯಮ ಗಾತ್ರದ್ದು ರೂ2500ರಿಂದ 4200 ಹಾಗೂ ಸಣ್ಣ ಈರುಳ್ಳಿ ರೂ1200ರಿಂದ 2800ರ ಮಟ್ಟದಲ್ಲಿ ವಹಿವಾಟಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry