ದೆಹಲಿ: ಪೆಟ್ರೋಲ್ ಇಳಿಕೆ, ಡೀಸೆಲ್ ಏರಿಕೆ
ನವದೆಹಲಿ (ಪಿಟಿಐ): ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 92ರಷ್ಟು ಪೈಸೆಯಷ್ಟು ಇಳಿಯಲಿದೆ. ಆದರೆ, ಡೀಸೆಲ್ ದರ ಪ್ರತಿ ಲೀಟರ್ ಡೀಸೆಲ್ಗೆ 37 ಪೈಸೆಯಷ್ಟು ಹೆಚ್ಚಾಗಲಿದೆ.
ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್ ದರ ರೂ 71.16 ಇದೆ. ಭಾನುವಾರ ಮಧ್ಯರಾತ್ರಿಯಿಂದ ಈ ದರ ರೂ 70.24ಕ್ಕೆ ಇಳಿಯಲಿದೆ ದೆಹಲಿ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.
ಈಗ ಪ್ರತಿ ಲೀಟರ್ ಡೀಸೆಲ್ ದರ ರೂ 40.91 ಇದ್ದು, ಭಾನುವಾರ ಮಧ್ಯರಾತ್ರಿಯಿಂದ ರೂ 41.28ಕ್ಕೆ ಏರಲಿದೆ.
`ಹೆಚ್ಚಿಸಲಾಗಿದ್ದ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸಿದ್ದರಿಂದ ಹಾಗೂ ಡೀಸೆಲ್ಗೆ ಸೆಪ್ಟೆಂಬರ್ನಿಂದ ನೀಡಲಾಗುತ್ತಿದ್ದ 37 ಪೈಸೆಯಷ್ಟು ತೆರಿಗೆ ವಿನಾಯ್ತಿಯನ್ನು ರದ್ದು ಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ~ ಎಂದು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.