ದೆಹಲಿ: ಪ್ರಧಾನಿ ನಿವಾಸದ ಬಳಿ ಸ್ಫೋಟ

7

ದೆಹಲಿ: ಪ್ರಧಾನಿ ನಿವಾಸದ ಬಳಿ ಸ್ಫೋಟ

Published:
Updated:

ನವ ದೆಹಲಿ: ಪ್ರಧಾನ ಮಂತ್ರಿ ನಿವಾಸದ ಬಳಿ ಇಸ್ರೇಲಿ ರಾಯಭಾರಿ ಕಚೇರಿಗೆ ಸೇರಿದ ಕಾರಿನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಇಸ್ರೇಲಿ ರಾಯಭಾರ ಕಚೇರಿಯ ಸಿಬ್ಬಂದಿಯೂ ಸೇರಿದಂತೆ ಮೂವರು ಗಾಯಗೊಂಡ ಘಟನೆ ರಾಷ್ಟ್ರದ ರಾಜಧಾನಿಯಲ್ಲಿ ಸೋಮವಾರ ಸಂಜೆ ನಡೆದಿದೆ.

ಮೋಟಾರು ಸೈಕಲ್ ಒಂದು ಇಸ್ರೇಲಿ ರಾಯಭಾರಿ ಕಚೇರಿಯ ಕಾರನ್ನು ಹಿಂಬಾಲಿಸಿ ಬಂದಾಗ ಸ್ಫೋಟವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇಸ್ರೇಲಿ ರಾಯಭಾರಿ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರೊಂದಿಗೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹಾಗೂ ಬಾಂಬ್ ನಿಶ್ಕ್ರಿಯ ದಳದ ಸಿಬ್ಬಂದಿಯೂ  ಘಟನಾ ಸ್ಥಳಕ್ಕೆ  ಧಾವಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry