ಶುಕ್ರವಾರ, ಮೇ 14, 2021
21 °C

ದೆಹಲಿ ಬಾಂಬ್ ಸ್ಫೋಟ ಸುಳಿವು ಇಲ್ಲ: ಚಿದಂಬರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ದೆಹಲಿ ಹೈಕೋರ್ಟ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇನ್ನೂ ಖಚಿತ ಸುಳಿವು ಸಿಕ್ಕಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮಧ್ಯೆ, ಸ್ಫೋಟಕ್ಕೆ ಹೊಣೆ ಹೊತ್ತು `ಹುಜಿ~ ಸಂಘಟನೆ ಹೆಸರಿನಲ್ಲಿ ಜಮ್ಮು ಕಾಶ್ಮೀರದಿಂದ ಇ-ಮೇಲ್ ಕಳುಹಿಸಿದಾತನನ್ನು ತನಿಖಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.`ಸ್ಫೋಟದ ಸಂಚುಕೋರರ ಬಗ್ಗೆ ಕೆಲವು ಭರವಸೆದಾಯಕ ಸುಳಿವುಗಳು ಸಿಕ್ಕಿವೆ. ಆದರೆ ಅವನ್ನು ಖಚಿತ ಸುಳಿವುಗಳು ಎನ್ನಲಾಗದು~ ಎಂದು ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ಬಾಂಬ್ ತಯಾರಿಕೆಗೆ ಯಾವ ಸ್ಫೋಟಕಗಳನ್ನು ಬಳಸಲಾಗಿತ್ತು ಎಂಬುದನ್ನು ಪತ್ತೆಹಚ್ಚಲು ವಿಧಿವಿಜ್ಞಾನ ತಜ್ಞರು ಯತ್ನಿಸುತ್ತಿದ್ದಾರೆ. ನೈಟ್ರೇಟ್ ಬಳಸಿ ಸ್ಫೋಟಕಗಳನ್ನು ತಯಾರಿಸಿರುವುದು ಪ್ರಾಥಮಿಕ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಆದರೆ ಸ್ಫೋಟಕಗಳ ನಿಜ ಸ್ವರೂಪ ತಿಳಿಯುವ ನಿಟ್ಟಿನಲ್ಲಿ ಇನ್ನಷ್ಟು ವಿಶ್ಲೇಷಣೆಗಳು ನಡೆದಿವೆ~ ಎಂದೂ ಅವರು ಹೇಳಿದ್ದಾರೆ.ಸ್ಫೋಟಕ್ಕೆ ಹುಜಿ ಸಂಘಟನೆ ಹೊಣೆ ಎಂದು ಜಮ್ಮು ಕಾಶ್ಮೀರದ  ಕಿಶ್ತ್‌ವಾರ್ ಜಿಲ್ಲೆಯ ಇಂಟರ್‌ನೆಟ್ ಕೆಫೆಯೊಂದರಿಂದ ಇ-ಮೇಲ್ ಕಳುಹಿಸಿದ ವ್ಯಕ್ತಿಯನ್ನು ತನಿಖಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದರು.ಸ್ಫೋಟದ ಹಿಂದೆ ಗಡಿಯಾಚೆಗಿನ ಕೈವಾಡ ಇರುವ ಸಾಧ್ಯತೆಯನ್ನು ಚಿದಂಬರಂ ತಳ್ಳಿಹಾಕಲಿಲ್ಲ. `ಈ ಸಂದರ್ಭದಲ್ಲಿ ಪ್ರತಿ ಸಂಘಟನೆಯ ಬಗ್ಗೆಯೂ ಅನುಮಾನವಿದೆ ಎಂದರು.ಈ ಮಧ್ಯೆ, ಪ್ರಧಾನಿ ಮನಮೋಹನ್ ಸಿಂಗ್ ಘಟನೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಹೆಚ್ಚಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಚಿದಂಬರಂ ಮತ್ತು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.