ಶನಿವಾರ, ಏಪ್ರಿಲ್ 17, 2021
32 °C

ದೆಹಲಿ ಮೇಯರ್ ಪ್ರಾಧ್ಯಾಪಕಿ ರಜನಿ ಅಬ್ಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಿಜೆಪಿ ಅಭ್ಯರ್ಥಿ ಹಾಗೂ ದೆಹಲಿ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕಿ ರಜನಿ ಅಬ್ಬಿ ಅವರು ಬುಧವಾರ ದೆಹಲಿಯ ಮೇಯರ್ ಆಗಿ ಚುನಾಯಿತರಾದರು. ಅವರು ಕಾಂಗ್ರೆಸ್ಸಿನ ತಮ್ಮ ಪ್ರತಿಸ್ಪರ್ಧಿ ಸವಿತಾ ಶರ್ಮಾ ಅವರನ್ನು 88 ಮತಗಳಿಂದ ಪರಾಭವಗೊಳಿಸಿದರು.ಮುಖರ್ಜಿ ನಗರ ವಾರ್ಡ್ ನಿಂದ ಪ್ರಪ್ರಥಮ ಬಾರಿಗೆ ದೆಹಲಿ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವ ರಜನಿ ಅಬ್ಬಿ ಅವರು ಮಹಾನಗರ ಪಾಲಿಕೆಯ ವಿಶೇಷ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ 170 ಮತಗಳನ್ನು ಪಡೆದರೆ, ಸಿತಾ ಶರ್ಮಾ ಅವರು 82 ಮತಗಳನ್ನು ಪಡೆದರು. ಎಂಟು ಮತಗಳು ಅಪಮೌಲ್ಯಗೊಂಡವು. ಅಬ್ಬಿ ಅವರು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾದ್ದರಿಂದ ಲಾಭದ ಹುದ್ದೆ ಹೊಂದಿದ್ದಾರೆ ಎಂದು ಚುನಾವಣೆಗೆ ಮುಂಚೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೋಲಾಹದ ದೃಶ್ಯಗಳು ಕಂಡು ಬಂದವು.ಅಬ್ಬಿ ಅವರು ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಮುನ್ನವೇ ದೆಹಲಿ ವಿಶ್ವವಿದ್ಯಾಲಯದ  ಒಪ್ಪಿಗೆ ಪಡೆದಿದ್ದರು ಎಂದು ಬಿಜೆಪಿ ಸದಸ್ಯರು ಪ್ರತಿಪಾದಿಸಿದರು.ಪೃಥ್ವೀರಾಜ್ ಸಾಹ್ನಿ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ನೂತನ ಮೇಯರ್ ಅವರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಐದು ವರ್ಷಗಳ ಅವಧಿಯಲ್ಲಿ ಎರಡನೇ ಮಹಿಳಾ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರತಿ ಮೆಹ್ರಾ ಅವರು 2007ರಿಂದ ಸತತವಾಗಿ ಎರಡು ಬಾರಿ ದೆಹಲಿಯ ಮೇಯರ್ ಆಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.