ಸೋಮವಾರ, ಜನವರಿ 20, 2020
27 °C

ದೆಹಲಿ: ರಾಷ್ಟ್ರಪತಿ ಆಳ್ವಿಕೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):ದೆಹಲಿಯಲ್ಲಿ ಸರ್ಕಾರ ರಚನೆಗೆ ಯಾವುದೇ ಪಕ್ಷ ಆಸಕ್ತಿ ತೋರದೇ ಇರುವುದರಿಂದ   ಬಿಕ್ಕಟ್ಟು ಪರಿಹರಿಸಲು ರಾಷ್ಟ್ರಪತಿ ಆಳ್ವಿಕೆ ಹೇರಲು ದೆಹಲಿಯ ಲೆ. ಗವರ್ನರ್‌ ನಜೀಬ್‌ ಜಂಗ್‌ ಶಿಫಾರಸು ಮಾಡಿದ್ದಾರೆ.ದೆಹಲಿಯಲ್ಲಿ ಅತಿ ದೊಡ್ಡ ಪಕ್ಷವಾಗಿ­ರುವ ಬಿಜೆಪಿ ಮತ್ತು ಎರಡನೇ ದೊಡ್ಡ ಪಕ್ಷವಾಗಿರುವ ಆಮ್‌ ಆದ್ಮಿ ಪಕ್ಷದ ಜತೆ ವ್ಯಾಪಕ ಸಮಾಲೋಚನೆ ನಂತರ ಜಂಗ್‌ ಅವರು ರಾಷ್ಟ್ರಪತಿ­ಗಳಿಗೆ ವರದಿ ಸಲ್ಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.‘ಯಾವುದೇ ಪಕ್ಷ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟತೆಯೂ ಇಲ್ಲ. ಆಮ್‌ ಆದ್ಮಿ ಪಕ್ಷ ಇನ್ನಷ್ಟು ಸಮಾಲೋಚನೆ ನಡೆಸಲು  ಸಮಯ ಕೋರಿದೆ. ಹೀಗಾಗಿ ಯಾವುದಾದರೂ ಪಕ್ಷ ಅಥವಾ ಪಕ್ಷ ಗಳ ಗುಂಪು ಸರ್ಕಾರ ರಚಿಸುವ ತನಕ ವಿಧಾನ­ಸಭೆ ಅಮಾನತಿನಲ್ಲಿರಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು’ ಎಂದು ವರದಿ ಸಲ್ಲಿಸ­ಲಾಗಿದೆ. ಯಾವ ಪಕ್ಷವೂ ಸರ್ಕಾರ ರಚನೆಗೆ ಮುಂದಾಗದಿದ್ದರೆ ಎರಡು ದಿನ­ಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗ­ಬಹುದು .

*18 ಅಂಶಗಳ ಪತ್ರಕ್ಕೆ ಕಾಂಗ್ರೆಸ್‌ ಉತ್ತರ

 

ಪ್ರತಿಕ್ರಿಯಿಸಿ (+)