ಸೋಮವಾರ, ಮಾರ್ಚ್ 1, 2021
29 °C

ದೆಹಲಿ ಸರ್ಕಾರ ರಚನೆ: ಬಿಜೆಪಿ, ಕಾಂಗ್ರೆಸ್ಸಿಗೆ ಸುಪ್ರೀಂ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ ಸರ್ಕಾರ ರಚನೆ: ಬಿಜೆಪಿ, ಕಾಂಗ್ರೆಸ್ಸಿಗೆ ಸುಪ್ರೀಂ ಪ್ರಶ್ನೆ

ನವದೆಹಲಿ (ಐಎಎನ್ಎಸ್): ದೆಹಲಿಯಲ್ಲಿ ಪರ್ಯಾಯ ಸರ್ಕಾರ ರಚನೆ ಸಾಧ್ಯತೆ ಪತ್ತೆಗೆ ಇಚ್ಛಿಸಿದ್ದೀರಾ ಎಂದು ಪ್ರಶ್ನಿಸಿ ಸುಪ್ರಿಂಕೋರ್ಟ್ ಶುಕ್ರವಾರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.ದೆಹಲಿ ಶಾಸನ ಸಭೆಯಲ್ಲಿ ಇರುವ ವಿವಿಧ ರಾಜಕೀಯ ಪಕ್ಷಗಳ ಹಾಲಿ ಗುಂಪುಗಳ 'ಪಕ್ಷಾಂತರ' ಸಾಧ್ಯತೆಯತ್ತ ಕಣ್ಣೀಟ್ಟಿರುವುದು ಮಾತ್ರವೇ ವಿಧಾನಸಭೆಯನ್ನು ಅನಿದಿಷ್ಠ ಆಮಾನತಿನಲ್ಲಿ ಇಟ್ಟಿರುವುದಕ್ಕೆ ಇರುವ ಸಮರ್ಥನೆ ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದನ್ನು ಅನುಸರಿಸಿ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಈ ನೋಟಿಸ್ ಜಾರಿ ಮಾಡಿತು.'ವಿಧಾನಸಭೆಯನ್ನು ಒಮ್ಮೆ ಅನಿರ್ದಿಷ್ಟ ಅಮಾನತಿನಲ್ಲಿ ಇಟ್ಟರೆ ಈ ಪರಿಸ್ಥಿತಿ ಒಂದು ವರ್ಷಕಾಲ ಹಾಗೆಯೇ ಉಳಿಯುತ್ತದೆ. ಇದು ದೆಹಲಿಯ ಜನರನ್ನು ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರ್ಕಾರವನ್ನು ಹೊಂದುವ ಅವಕಾಶದಿಂದ ವಂಚಿತರನ್ನಾಗಿ ಮಾಡುತ್ತದೆ' ಎಂದು ಅರ್ಜಿದಾರ ಆಮ್ ಆದ್ಮಿ ಪಕ್ಷವು ನ್ಯಾಯಾಲಯಕ್ಕೆ ತಿಳಿಸಿತು.ದೆಹಲಿ ವಿಧಾನಸಭೆಯನ್ನು ಅನಿರ್ದಿಷ್ಟ ಅಮಾನತಿನಲ್ಲಿ ಇರಿಸಿ ರಾಷ್ಟ್ರಪತಿ ಅವರು ಹೊರಡಿಸಿದ ಘೋಷಣೆಯನ್ನು ಎಎಪಿ ಪ್ರಶ್ನಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.