ದೆಹಲಿ ಹೈಕೋರ್ಟ್ ಬಾಂಬ್ ಸ್ಫೋಟ: ವ್ಯಕ್ತಿ ಬಂಧನ

7

ದೆಹಲಿ ಹೈಕೋರ್ಟ್ ಬಾಂಬ್ ಸ್ಫೋಟ: ವ್ಯಕ್ತಿ ಬಂಧನ

Published:
Updated:

ಜಮ್ಮು/ನವದೆಹಲಿ (ಪಿಟಿಐ): ಕಳೆದ ವರ್ಷ ದೆಹಲಿ ಹೈಕೋರ್ಟ್ ಹೊರಗೆ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಒಬ್ಬ ವ್ಯಕ್ತಿಯನ್ನು ಬಂಧಿಸಿದೆ.

ಬಂಧಿತನನ್ನು ಮೊಹಮ್ಮದ್ ಅಯೂಬ್ ಎಂದು ಗುರುತಿಸಲಾಗಿದೆ. ಈ ಪ್ರಕರಣದ  ಪ್ರಮುಖ ಆರೋಪಿ ವೈದ್ಯ ವಿದ್ಯಾರ್ಥಿ ವಾಸಿಂ ಅಕ್ರಂ ವಿಚಾರಣೆ ವೇಳೆ ಅಯೂಬ್ ಹೆಸರನ್ನು ಹೇಳಿದ್ದನು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಕರಣದ ಸಂಚು ರೂಪಿಸಿರುವ ಮತ್ತು ತನಿಖಾ ದಳಕ್ಕೆ ಬೇಕಾಗಿರುವ  ಹಿಜ್‌ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಜಹಾಂಗೀರ್‌ನಿಂದ ಅಯೂಬ್ ಸಿಮ್ ಕಾರ್ಡ್ ಖರೀದಿಸಿದ್ದ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry