ದೇಗುಲದ ಕಲ್ಯಾಣಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದ ನಾಗರಿಕರು

7

ದೇಗುಲದ ಕಲ್ಯಾಣಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದ ನಾಗರಿಕರು

Published:
Updated:

ಬೆಂಗಳೂರು: ವಸಂತಪುರ ದೇವಸ್ಥಾನದ ಕಲ್ಯಾಣಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಶನಿವಾರ ನಾಗರಿಕರು ಮುಂದಾಗಿದ್ದಾರೆ. ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಅಭಿವೃದ್ಧಿ ಪಡಿಸಲು ಪಾಲಿಕೆಯ ಎಂಜಿನಿಯರ್ ವಿಭಾಗಕ್ಕೆ ರೂ. 50 ಲಕ್ಷ ಬಿಡುಗಡೆಯಾಗಿತ್ತು. ಆದರೂ ಯಾವುದೇ ಸ್ವಚ್ಛತಾ ಕಾರ್ಯ ಜರುಗಿರಲಿಲ್ಲ. ಇದರಿಂದ ಬೇಸತ್ತ ನಾಗರಿಕರು  ‘ಸೇವಾ’, ‘ಸನ್ ಲಿಟ್’ ಸೇ ಆ ಸಂಸ್ಥೆಯ ಸದಸ್ಯರೊಡಗೂಡಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಭಾನುವಾರವೂ ಸ್ವಚ್ಛತಾ ಕಾರ್ಯ ಮುಂದುವರಿಯಲಿದೆ.ಒಂದು ದಿನದಲ್ಲಿ ಕಲ್ಯಾಣಿಯ ಸ್ವಚ್ಛತಾ ಕಾರ್ಯ ಶೇ 25ರಷ್ಟು ಮಾತ್ರ ಪೂರ್ಣವಾಗಿದ್ದು, ಪಾಲಿಕೆ ಎಂಜಿನಿಯರುಗಳು ಪ್ರತಿ ಶನಿವಾರ ನಡೆಯುವ ನಗರ ಸ್ವಚ್ಛತಾ ಕಾರ್ಯಕ್ರಮದಡಿಯೇ ಕಲ್ಯಾಣಿಯನ್ನು ಕೂಡ ಸ್ವಚ್ಛಗೊಳಿಸುವ ಭರವಸೆ ನೀಡಿದ್ದಾರೆ ಎಂದು ನಿವಾಸಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry