ಶುಕ್ರವಾರ, ಮೇ 7, 2021
22 °C

ದೇಜಗೌ ಸೇರಿದಂತೆ 6 ಮಂದಿಗೆ :ಮುಕ್ತ ವಿವಿ ಗೌರವ ಡಾಕ್ಟರೇಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 12 ನೇ ಘಟಿಕೋತ್ಸವದಲ್ಲಿ ಹೆಸರಾಂತ ಸಾಹಿತಿ ಪ್ರೊ.ದೇ.ಜವರೇಗೌಡ ಸೇರಿದಂತೆ ಆರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.ಈ ಬಾರಿ ಸಾಹಿತಿ ನಾಡೋಜ ಪ್ರೊ.ದೇ. ಜವರೇಗೌಡ, ಎಮರಿಟಸ್‌ನ ಪ್ರಾಧ್ಯಾಪಕ ಪ್ರೊ. ಕೆ.ಜೆ. ರಾವ್, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್‌ನ ವಿಶ್ರಾಂತ ನಿರ್ದೇಶಕ ಪ್ರೊ.ಜಿ.ತಿಮ್ಮಯ್ಯ, ಯೋಜನಾ ಆಯೋಗ ಮತ್ತು ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ ಡಾ.ನರೇಂದ್ರ ಜಾದವ್, ಮಂಡ್ಯದ ಪಿಇಎಸ್ ಟ್ರಸ್ಟ್ ಅಧ್ಯಕ್ಷ ಎಚ್.ಡಿ. ಚೌಡಯ್ಯ, ಬೆಂಗಳೂರಿನ ಎಸ್. ಎ-ಮುದ್ರಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಪ್ರೊ. ಕೆ.ಇ. ರಾಧಾಕೃಷ್ಣ ಅವರು ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದು, ಏ. 4ರ ಬುಧವಾರ ಮಧ್ಯಾಹ್ನ 4.30ಕ್ಕೆ ಕಲಾಮಂದಿರದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಗೌರವ ಪ್ರದಾನ ಮಾಡಲಾಗುವುದು~ ಎಂದು ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಮುಕ್ತ ವಿವಿಯಲ್ಲಿ 3.5 ಲಕ್ಷ ಮಂದಿ ನೋಂದಣಿಯಾಗಿದ್ದಾರೆ. ದೇಶದಲ್ಲಿ ಇಗ್ನೊ ನಂತರದಲ್ಲಿ ಅತೀ ಹೆಚ್ಚು ನೋಂದಣಿಯಾಗಿರುವುದು ಮುಕ್ತ ವಿವಿಯಲ್ಲಿ ಮಾತ್ರ. 2012-13 ನೇ ಸಾಲಿನಲ್ಲಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಕ್ಯಾಂಪಸ್‌ನಲ್ಲಿ 22.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ವಿಜ್ಞಾನ ಭವನವನ್ನು ನಿರ್ಮಿಸಲಾಗುತ್ತಿದೆ~ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.