ದೇವತಾ ಪ್ರತಿಷ್ಠಾಪನೆ

7

ದೇವತಾ ಪ್ರತಿಷ್ಠಾಪನೆ

Published:
Updated:

ಲಕ್ಷ್ಮಿದೇವಿನಗರದಲ್ಲಿ ಶತಮಾನಕ್ಕೂ ಹಳೆಯದಾದ ತಾರೆ ಮರದ ಬುಡದಲ್ಲಿ ಪುಟ್ಟ ಕಟ್ಟಡದಲ್ಲಿ ಶನಿದೇವರ ಪೂಜೆ ಸಲ್ಲಿಸಲಾಗುತಿತ್ತು. ತಿಮ್ಮರಾಜು ಹಾಗೂ ಗ್ರಾಮಸ್ಥರು ಸೇರಿ ನಿರ್ಮಿಸಿರುವ ಶನಿಮಹಾತ್ಮ , ಗಣೇಶ , ಛಾಯಾದೇವಿ ವಿಗ್ರಹ ಹಾಗೂ ನವಗ್ರಹಗಳ ಪ್ರತಿಷ್ಠಾಪನೆ ಫೆ.17ರಿಂದ 19ರವರೆಗೆ ನಡೆಯಲಿದೆ. ನೂತನ ಕಟ್ಟಡ ಉದ್ಘಾಟನೆಯ ಈ ಸಂದರ್ಭದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳೂ ನಡೆಯಲಿವೆ. 

ಒಂದು ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. 15ಲಕ್ಷ ವೆಚ್ಚದಲ್ಲಿ ಗರ್ಭಗುಡಿ ನಿರ್ಮಿಸಲಾಗಿದೆ . ಫೆ.19ರಂದು ಇಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ.

ಜಯಮ್ಮ ಮತ್ತು ಗಂಗಪ್ಪ ದಂಪತಿ ಹಲವು ದಶಕಗಳಿಂದ ತಾರೆ ಮರದ ಬುಡದಲ್ಲಿ ವಿಶೇಷ ಪೂಜೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದರು. ನಂತರ ತಿಮ್ಮರಾಜು ನೇತೃತ್ವದಲ್ಲಿ ಗ್ರಾಮಸ್ಥರು ಸೇರಿ ನೂತನ ಕಟ್ಟಡ ನಿರ್ಮಿಸಿದ್ದಾರೆ.

ಫೆ.17ರಂದು ದೇವರ ಪ್ರಾಣ ಪ್ರತಿಷ್ಠಾಪನೆ, ಅಗ್ನಿಮಥನ, ಚಂಡಿಕಾಯಾಗ , ಮಹಾಪೂಜೆ.18ರ ಬೆಳಿಗ್ಗೆ 8ಕ್ಕೆ ನವಗ್ರಹ ಸಹಿತ ವಿಶ್ರಾಂತಿ ಹೋಮ ನಡೆಯಲಿದೆ.

19ರಂದು ಬಾಲಗಂಗಾಧರನಾಥ ಸ್ವಾಮೀಜಿ, ತಿರುಸ್ವಾಮಿ, ಈಶ್ವರಾನಂದಸ್ವಾಮಿ ಸಮ್ಮುಖದಲ್ಲಿ ಕಳಸ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. 25 ಸಾವಿರ ಜನರಿಗೆ ಅನ್ನದಾನ ವ್ಯವಸ್ಥೆ ಇದೆ. ಗೃಹ ಸಚಿವ ಆರ್.ಅಶೋಕ್ ಸಮಾರಂಭಕ್ಕೆ ಚಾಲನೆ ನೀಡಲಿದ್ದು, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಎಂ.ಶ್ರೆನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಸುರೇಶ್‌ಕುಮಾರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕರಾದ ಎಸ್.ಮುನಿರಾಜು, ವಿಶ್ವನಾಥ್ ಮೊದಲಾದವರು ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry