ಶುಕ್ರವಾರ, ಏಪ್ರಿಲ್ 23, 2021
31 °C

ದೇವದಾಸಿ ಪದ ಬಳಕೆ ನಿಷೇಧ: ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: `ದೇವದಾಸಿ~ ಎಂಬ ಪದ ಬಳಕೆಯೇ ಸರಿ ಅಲ್ಲ. ಈ ಪದ ಬಳಕೆ ಮಾಡಬಾರದು. ಇದಕ್ಕೆ ಪರ್ಯಾಯ ಪದವನ್ನು ಗುರುತಿಸಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಂಧೀಖಾನೆ ಖಾತೆ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವದಾಸಿ ಎಂಬ ಪದ ಬಳಕೆ ಸಮಾಜದ ಮಹಿಳೆಯರಿಗೆ ಗೌರವ ತರುವಂಥದ್ದಲ್ಲ. ಹೀಗಾಗಿ ಪದ ಬಳಕೆ ಮಾಡಬಾರದು ಎಂದು ಇಲಾಖೆ ನಿರ್ಧರಿಸಿದೆ ಎಂದರು.

ಸೂಚನೆ: ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ದೇವದಾಸಿ ಪುನರ್ವಸತಿ ಯೋಜನೆ, ದೇವದಾಸಿ ಮಹಿಳೆಯರು, ದೇವದಾಸಿ ಮಹಿಳೆಯರ ಸಂಘಟನೆ ಹೀಗೆ ಹಲವು ರೀತಿಯಲ್ಲಿ ದೇವದಾಸಿ ಪದ ಬಳಕೆ ಆಗುತ್ತಿದೆ. ಆ ಪದವನ್ನು ಬಳಕೆ ಮಾಡಬಾರದು ಎಂದು ಇಲಾಖೆ ನಿರ್ಧರಿಸಿದೆ. ಅಧಿಕಾರಿಗಳು ಗಮನಿಸಬೇಕು ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.