ದೇವದುರ್ಗ:ಮುಂಗಾರು ಮಳೆ ಶುಭಾರಂಭ

ಬುಧವಾರ, ಜೂಲೈ 17, 2019
27 °C

ದೇವದುರ್ಗ:ಮುಂಗಾರು ಮಳೆ ಶುಭಾರಂಭ

Published:
Updated:

ದೇವದುರ್ಗ: ಕಳೆದ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಆದರೆ ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ರೈತರಿಗೆ ಮುಂಗಾರು ಭರವಸೆ ನೀಡಿರುವುದರಿಂದ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ನಡೆದಿರುವುದು ಕಂಡು ಬಂದಿದೆ.ತಾಲ್ಲೂಕಿನ ಹಲವಡೆ ಕಳೆದ 2-3 ದಿನಗಳಿಂದ `ಕೃತ್ತಿಕಾ~ ಮಳೆ ಉತ್ತಮವಾಗಿ ಬರತೊಡಗಿದೆ. ಈ ಬಾರಿ 43 ಸೆ.ಮೀ ಗಡಿದಾಟಿದ್ದ ಬಿಸಿಲಿನ ತಾಪಮಾನ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಗಿದೆ. ಮುಂಗಾರು ಬಿತ್ತನೆಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಜಮೀನುಗಳ ಸ್ವಚ್ಛತೆಗಾಗಿ ರೈತರು ಎಡಬಿಡದೆ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.ಕಳೆದ ಬಾರಿ ಬಿತ್ತನೆ ಬೀಜಗಳನ್ನು ಶೇ 75ರ ಸೆಬ್ಸಿಡಿ ದರದಲ್ಲಿ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ನಂತರ ಅದನ್ನು ಈಡೇರಿಸುವಲ್ಲಿ ವಿಫಲವಾಗಿತು. ಇದರಿಂದ ತಾಲ್ಲೂಕಿನ ಅದೆಷ್ಟೊ ಬಡ ರೈತ ಕುಟುಂಬಗಳು ಅನಿವಾರ್ಯ ಎಂಬುವಂತೆ ಸಾಲ ಮಾಡಿ ಬೀಜ ಪಡೆದು ಬಿತ್ತನೆ ಮಾಡಿದರೆ ಮುಂಗಾರು ಮಳೆ ಕೈಕೊಟ್ಟಿತು.ಮಾಡಿದ ಸಾಲ ತೀರಿಸಲು ಊರು ಬಿಡುವಂತ ಪರಿಸ್ಥಿತಿ ನಿರ್ಮಾಣವಾಗಿತು.ಪ್ರತಿ ವರ್ಷ ರೈತರ ಹೆಸರಿನಲ್ಲಿ ತಾಲ್ಲೂಕಿಗೆ ಬರುವ ಸಾವಿರಾರು ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳು ಕೆಲವೇ ದಿನಗಳಲ್ಲಿ ಮಾಯಾವಾಗುತ್ತಿದ್ದರೂ ಇದುವರೆಗೂ ಅದರ ಬಗ್ಗೆ ಗಮನ ಹರಿಸುವವರು ಇಲ್ಲದಂತಾಗಿದೆ.ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಬರುವ ಬೀಜಗಳನ್ನು ಅಧಿಕಾರಿಗಳು ರಾತ್ರೋ ರಾತ್ರಿ ಉಳ್ಳವರಿಗೆ ನೀಡಿ ಕೈ ತೋಳದು ಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಇದೇ ಸಂಪ್ರದಾಯವನ್ನು ಮುಂದುವರಿಸದೆ ಈ ಬಾರಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ಮುಟ್ಟಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಯರಮಸಾಳ ಗ್ರಾಮದ ರೈತ ಭೀಮಪ್ಪ ಅವರು. ಈ ಬಗ್ಗೆ ರೈತರಲ್ಲಿ ಜಾಗೃತಿ ಮೊಡಿಸಬೇಕಾಗಿರುವ ಕೆಲವು ರೈತ ಪರ ಸಂಘಟನೆಗಳು ಮೌನಕ್ಕೆ ಶರಣಾಗುತ್ತಿರುವುದು ಹಲವರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry