ದೇವದುರ್ಗ: 3 ಶವ ಕಳ್ಳತನ

7

ದೇವದುರ್ಗ: 3 ಶವ ಕಳ್ಳತನ

Published:
Updated:

ದೇವದುರ್ಗ (ರಾಯಚೂರು ಜಿ.): ಪಟ್ಟಣದ ಪೊಲೀಸ್ ಠಾಣೆಯ ಪಕ್ಕದ ಮುಸ್ಲಿಂ ಸಮುದಾಯದ ಖಬರಸ್ಥಾನದಲ್ಲಿದ್ದ ಗೋರಿ ಅಗೆದು ಪುರುಷರ ಎರಡು ಮತ್ತು ಒಂದು ಶಿಶುವಿನ ಶವವನ್ನು ಸೋಮವಾರ ರಾತ್ರಿ ಕಳ್ಳತನ ಮಾಡಲಾಗಿದೆ. ಈ ಕುರಿತು ಮುಸ್ಲಿಂ ಒಕ್ಕೂಟ ಸಮಿತಿ ಪೊಲೀಸರಿಗೆ ದೂರು ಸಲ್ಲಿಸಿದೆ.ಪಟ್ಟಣ ಪಾಶಾ ಶಹಪೂರಿ ಮೃತಪಟ್ಟ ಹಿನ್ನೆಲೆಯಲ್ಲಿ ಖಬರಸ್ಥಾನದಲ್ಲಿ ನೆಲ ಅಗೆಯುವುದಕ್ಕಾಗಿ ಸ್ಥಳ ಗುರುತಿಸಲು ಮಂಗಳವಾರ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.ಶಿವರಾತ್ರಿಯ ಹಬ್ಬದ ದಿನವಾದ ಸೋಮವಾರ ತಡರಾತ್ರಿ ಘಟನೆ ನಡೆದಿರುವುದಾಗಿ ಶಂಕಿಸಲಾಗಿದೆ. 15 ದಿನಗಳ ಹಿಂದೆ ಮೃತಟ್ಟಿದ್ದ ಹಸುಗೂಸಿನ ಗೋರಿ, ಎರಡು ವರ್ಷದ ಹಿಂದೆ ಮೃಪಟ್ಟಿದ್ದ ಜಹೀರುದ್ದೀನ್ ಅವರ ಗೋರಿ ಹಾಗೂ  ಮೂರು ವರ್ಷದ ಹಿಂದೆ ಮೃತಪಟ್ಟ ಪೊಲೀಸ್ ಖಾಜಾ ಮೈನುದ್ದೀನ್ ನಾಗುಂಡಿ ಅವರ ಗೋರಿಯನ್ನು ಅರೆಬರೆಯಾಗಿ ಅಗೆದು ಬಿಟ್ಟಿರುವುದು ಕಂಡು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry