ಭಾನುವಾರ, ಜೂನ್ 20, 2021
26 °C

ದೇವಧರ್‌ ಟ್ರೋಫಿ: ದಕ್ಷಿಣ–ಉತ್ತರ ವಲಯ ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ: ದಕ್ಷಿಣ ವಲಯ ತಂಡದವರು ಇಲ್ಲಿ ನಡೆಯುತ್ತಿರುವ ದೇವಧರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಮವಾರ ಉತ್ತರ ವಲಯ ಎದುರು ಪೈಪೋಟಿ ನಡೆಸಲಿದ್ದಾರೆ.ಈ ಏಕದಿನ ಪಂದ್ಯ ಡಾ.ವೈ.ಎಸ್‌.ರಾಜಶೇಖರ ರೆಡ್ಡಿ ಎಸಿಎ–ವಿಸಿಡಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ದಕ್ಷಿಣ ವಲಯ ತಂಡವನ್ನು ಆರ್‌.ವಿನಯ್‌ ಕುಮಾರ್‌ ಮುನ್ನಡೆಸಲಿದ್ದಾರೆ. ಅವರು ರಣಜಿ, ಇರಾನಿ ಕಪ್‌ ಹಾಗೂ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಕರ್ನಾಟಕ ತಂಡವನ್ನು ಮುನ್ನಡೆಸಿದ್ದರು. ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ರಾಬಿನ್‌ ಉತ್ತಪ್ಪ, ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ, ಅಭಿಮನ್ಯು ಮಿಥುನ್‌ ಕೂಡ ಇದ್ದಾರೆ.ಉತ್ತರ ವಲಯ ತಂಡವನ್ನು ಆಫ್‌ ಸ್ಪಿನ್ನರ್‌ ಹರಭಜನ್‌ ಸಿಂಗ್‌ ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಗೌತಮ್‌ ಗಂಭೀರ್‌, ವೀರೇಂದ್ರ ಸೆಹ್ವಾಗ್‌ ಇದ್ದಾರೆ. ಫಾರ್ಮ್‌ನಲ್ಲಿಲ್ಲದ ಗಂಭೀರ್‌ ಹಾಗೂ ಸೆಹ್ವಾಗ್‌ಗೆ ಈ ಪಂದ್ಯ ಮಹತ್ವದ್ದಾಗಿದೆ.ತಂಡಗಳು ಇಂತಿವೆ: ದಕ್ಷಿಣ ವಲಯ: ಆರ್‌.ವಿನಯ್‌ ಕುಮಾರ್‌ (ನಾಯಕ), ರಾಬಿನ್‌ ಉತ್ತಪ್ಪ, ಬಾಬಾ ಅಪರಾಜಿತ್‌, ಸಗುಣ್‌ ಕಾಮತ್‌, ಅಭಿಮನ್ಯು ಮಿಥುನ್‌, ಮನೀಷ್‌ ಪಾಂಡೆ, ಕೆ.ಎಲ್‌.ರಾಹುಲ್‌, ರಹೀಲ್‌ ಷಾ, ಮುರಳಿ ವಿಜಯ್‌, ದಿನೇಶ್‌ ಕಾರ್ತಿಕ್‌, ರಿಕಿ ಭುಯಿ, ಯೋ ಮಹೇಶ್‌, ಪ್ರಗ್ಯಾನ್‌ ಓಜಾ, ಪಿ.ಪರಮೇಶ್ವರನ್‌ ಹಾಗೂ ಸಂಜು ಸ್ಯಾಮ್ಸನ್‌.ಉತ್ತರ ವಲಯ: ಹರ್ಭಜನ್‌ ಸಿಂಗ್‌ (ನಾಯಕ), ಗೌತಮ್‌ ಗಂಭೀರ್‌ (ಉಪನಾಯಕ), ವೀರೇಂದ್ರ ಸೆಹ್ವಾಗ್‌, ಉನ್ಮುಕ್ತ್‌ ಚಾಂದ್‌, ಪ್ರಶಾಂತ್‌ ಚೋಪ್ರಾ, ರಿಶಿ ಧವನ್‌, ಗುರ್‌ಕೀರತ್‌ ಸಿಂಗ್‌, ಸಿದ್ಧಾರ್ಥ್‌ ಕೌಲ್‌, ಮಂದೀಪ್‌ ಸಿಂಗ್‌, ಮಿಲಿಂಡ್‌ ಕುಮಾರ್‌, ಆಶೀಶ್‌ ನೆಹ್ರಾ, ರಜತ್‌ ಪೈಲ್ವಾಲ್‌, ಪರ್ವೇಜ್‌ ರಸೂಲ್‌, ನಿತಿನ್‌ ಸೈನಿ (ವಿಕೆಟ್‌ ಕೀಪರ್‌), ಅಭಿಷೇಕ್‌ ಸಕುಜಾ, ಇಶಾಂತ್‌ ಶರ್ಮ, ನಿಕಿಲ್‌ ಗಂಗ್ತಾ, ಅವಿಷೇಕ್‌ ಸಿನ್ಹಾ ಹಾಗೂ ಸೂರಜ್‌ ಯಾದವ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.