ಭಾನುವಾರ, ಮೇ 9, 2021
27 °C

ದೇವನಹಳ್ಳಿಗೆ ಹಾಡಿನ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್.ಕೆ. ಥಿಯೇಟರ್ ಸಂಸ್ಥೆ ನಿರ್ಮಾಣದ `ದೇವನಹಳ್ಳಿ~ ಚಿತ್ರಕ್ಕೆ `ನಿಮ್ಮಕ್ಕನ ನಾನು ಮದುವೆಯಾಗ್ತೀನಿ ನೋಡೋ ಚಿಕ್ಕಣ್ಣ... ನಾನು ನೀನು ಆಗೋಣ ಬಾರೋ ಬಾವ ಮೈದುನ...~ ಎಂಬ ಹಾಡಿನ ಚಿತ್ರೀಕರಣ ನಡೆಯಿತು.

 

ಅದರಲ್ಲಿ ಸ್ನೇಹಾ ನಾಯಕ್, ಚಿದಾನಂದ್, ಮೈಸೂರು ಮಾಲತಿ ಅಭಿನಯಿಸಿದ್ದರು. ಈ ಹಾಡನ್ನು ಬೆಂಗಳೂರಿನ ಯಲಹಂಕದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.ಇದೀಗ ಚಿತ್ರದ ಸೆನ್ಸಾರ್ ಕೂಡ ಮುಗಿದಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಿರ್ದೇಶಕ ಪಲ್ಲಕ್ಕಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ರಾವ ಮುತ್ತೋಜಿ ಛಾಯಾಗ್ರಹಣ, ಎಸ್. ಪ್ರಯೋಗ್ ಸಂಗೀತ, ಕೇಶವಾದಿತ್ಯ ಸಂಭಾಷಣೆ, ಫೈವ್ ಸ್ಟಾರ್ ಗಣೇಶ್, ಸದಾ ನೃತ್ಯ ನಿರ್ದೇಶನ, ಲಿಂಗರಾಜ್ ಸಂಕಲನ ಚಿತ್ರಕ್ಕಿದೆ. ಚಿತ್ರದ ಹಾಡುಗಳನ್ನು ನಾಗತಿಹಳ್ಳಿ ಚಂದ್ರಶೇಖರ್, ಪ್ರೊ. ಚಂದ್ರಶೇಖರ್ ತಾಳ್ಯ, ರಾಜೇಶ್ ಬರೆದಿದ್ದಾರೆ.ತಾರಾಗಣದಲ್ಲಿ ರಾಹುಲ್, ಶ್ರಾವಣಿ, ಶ್ರಿರಾಘವ, ಉದಯ್, ಸುಗ್ರೀವ್, ವಾಲಿ ವಿದ್ಯಾರ್ಥಿ, ಅರವಿಂದ್, ಸದಾಶಿವ ಬ್ರಹ್ಮಾವರ್, ಡಾ. ಚಕ್ರವರ್ತಿ, ರಾಜೇಶ್ ಅಭಿನಯಿಸಿದ್ದಾರೆ.

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.