ಬುಧವಾರ, ಅಕ್ಟೋಬರ್ 16, 2019
22 °C

ದೇವನಹಳ್ಳಿ: ಜೆಸಿಐ ಪದಾಧಿಕಾರಿಗಳ ಪದಗ್ರಹಣ

Published:
Updated:

ದೇವನಹಳ್ಳಿ: ಇಲ್ಲಿನ ಪುರಭವನದಲ್ಲಿ ಜೆಸಿಐ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಜೆಸಿಐ ಮತ್ತು ಜೆಸಿರೆಟ್ ವಿಭಾಗದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ  ಕೊಯಿರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಬಾಬು, ಸಂಘ ಸಂಸ್ಥೆಗಳು ಜನ ಕಲ್ಯಾಣ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಶಿಕ್ಷಣ ವಂಚಿತರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಸ್ವ ಉದ್ಯೋಗ ಇಲ್ಲವೆ ಆರ್ಥಿಕ ಪ್ರಾಬಲ್ಯ ಸಾಧಿಸಲು ಅವರಿಗೆ ಸಂಘ- ಸಂಸ್ಥೆಗಳು ನೆರವು ನೀಡಬೇಕು ಎಂದರು. ಯುವ ಜೆಸಿಐ ವಿಭಾಗ ವಲಯ 14ರ ನಿರ್ದೇಶಕ ಎಸ್.ಸುರೇಶ್ ಮಾತನಾಡಿದರು. ಯುವ ಜೆಸಿಐ ವಿಭಾಗ 2011ರ ಬಿ. ಶಿವಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜೆಸಿರೆಟ್ ವಲಯ 14ರ ನಿರ್ದೇಶಕಿ ಭಾಗ್ಯ ನಾಗರಾಜ್, ಜೆಸಿಐ ಅಧ್ಯಕ್ಷ ಎನ್.ರಮೇಶ್, ಜೆಸಿಐ ವಿಜಯಕುಮಾರ್, ಜೆಸಿಐ ಸಂಸ್ಥೆ ಕಾರ್ಯದರ್ಶಿ ಮಂಜುನಾಥ್, ಯೋಜನಾ ನಿರ್ದೇಶಕ ಹರೀಶ್, ಪೂರ್ವಾಧ್ಯಕ್ಷ ನಾರಾಯಣಸ್ವಾಮಿ, ಆನಂದ್, ಪಿಳ್ಳಪ್ಪ, ರವೀಂದ್ರ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಯುವ ಜೆಸಿಐ ಅಧ್ಯಕ್ಷ ವಿ.ನವೀನ್ ಹಾಗೂ ಜೆಸಿರೆಟ್ ಭಾಗ್ಯಾ ರಮೇಶ್ ಪದ ಗ್ರಹಣ ಸ್ವೀಕರಿಸಿದರು.

Post Comments (+)