ದೇವನಹಳ್ಳಿ: ತಜ್ಞ ವೈದ್ಯರ ನೇಮಕಕ್ಕೆ ಒತ್ತಾಯ

7

ದೇವನಹಳ್ಳಿ: ತಜ್ಞ ವೈದ್ಯರ ನೇಮಕಕ್ಕೆ ಒತ್ತಾಯ

Published:
Updated:

ದೇವನಹಳ್ಳಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ರೋಗಗಳ ವಿಭಾಗದಲ್ಲಿ ಕೂಡಲೇ ತಜ್ಞ ವೈದ್ಯರನ್ನು ನೇಮಕ ಮಾಡುವಂತೆ ತಾಲ್ಲೂಕು ಕನ್ನಡ ಜಾಗೃತಿ ವೇದಿಕೆ ಸರ್ಕಾರವನ್ನು ಒತ್ತಾಯಿಸಿತು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ.ಸಿ.ಲಕ್ಷ್ಮಿನಾರಾಯಣ್ ನೇತೃತ್ವದಲ್ಲಿ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಿದ ಸಂದರ್ಭ ಈ ಆಗ್ರಹ ಮಾಡಲಾಯಿತು.ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆಯಿದೆ. ಶುಚಿತ್ವದ ಕಡೆ ಇ್ನ ಹೆಚ್ಚಿನ ಗಮನ ನೀಡಬೇಕಿದೆ.  ಮೂಳೆ ಮತ್ತು ನೇತ್ರ ತಜ್ಞರು ಇಲ್ಲ.ಟ್ರೌಮಾ ಸೆಂಟರ್ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡರೂ ಸೂಕ್ತ ಸಿಬ್ಬಂದಿಯೊಂದಿಗೆ ಕಾರ್ಯಾರಂಭ ಮಾಡಿಲ್ಲ. ಕನಿಷ್ಠ 30ನಿಮಿಷಕ್ಕೊಮ್ಮೆ ಆಸ್ಪತ್ರೆಗೆ ಸಂಚರಿಸುವಂತಾಗಬೇಕು. ಆಸ್ಪತ್ರೆಯಲ್ಲಿ ಕುಡಿಯುವ ನೀರು ಸೌಕರ್ಯದ ಕಡೆ ನಿಗಾ ವಹಿಸಬೇಕು ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry