`ದೇವಮಾನವ'ನಿಗೆ ಸೊಳ್ಳೆಕಾಟ!

7

`ದೇವಮಾನವ'ನಿಗೆ ಸೊಳ್ಳೆಕಾಟ!

Published:
Updated:

ಜೋಧಪುರ (ಐಎಎನ್‌ಎಸ್): ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜೈಲು ಸೇರಿರುವ `ಸ್ವಯಂಘೋಷಿತ ದೇವಮಾನವ' ಅಸಾರಾಮ್ ಬಾಪು ವಿಪರೀತ ಸೊಳ್ಳೆಗಳ ಕಾಟ ಅನುಭವಿಸುತ್ತಿದ್ದಾರೆ.14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ 72 ವರ್ಷದ ಅಸಾರಾಮ್ ಜೋಧಪುರದ ಕೇಂದ್ರ ಕಾರಾಗೃಹದಲ್ಲಿ ಸೊಳ್ಳೆಗಳ ಕಾಟ ವಿಪರೀತವಾದ ಕಾರಣ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ರಾತ್ರಿ ನಿದ್ದೆ ಮಾಡಲಾಗದೆ ಎರಡು ದಿನಗಳನ್ನು ಕಳೆದಿರುವ ಅವರು ಬಳಲಿದಂತೆ ಕಾಣುತ್ತಿದ್ದಾರೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.ಪ್ರತೇಕ ಕೊಠಡಿಯಲ್ಲಿರುವ ಅಸಾರಾಮ್ ಅವರಿಗೆ ಮಲಗಲು ಚಾಪೆ ನೀಡಲಾಗಿದೆ. ಗಂಗಾಜಲವನ್ನು ಸಿಂಪಡಿಸಿ ಕೊಠಡಿಯನ್ನು ಶುದ್ಧಗೊಳಿಸಿಕೊಂಡಿದ್ದಾರೆ. ಜೊತೆಗಿರುವ ಇತರ ಕೈದಿಗಳು ಅವರ ಬೇಕು, ಬೇಡಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ.ಸಹ ಕೈದಿಗಳಿಗೆ ನೀಡುವ ಆಹಾರವನ್ನು ಸೇವಿಸಲು ನಿರಾಕರಿಸಿರುವ ಅವರು ಗೋಡಂಬಿ, ದ್ರಾಕ್ಷಿ ಸೇವಿಸಿದ್ದಾರೆ. ಅವರಿಗಾಗಿಯೇ ಕಿಚಡಿ ಸಿದ್ಧಪಡಿಸಿ ಕೊಡಲಾಗುತ್ತಿದೆ. ಅಸಾರಾಮ್‌ಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ಕಾರಾಗೃಹದ ಅಧಿಕಾರಿಗಳು ಹೇಳಿದ್ದಾರೆ. ಇತರ ಕೈದಿಗಳಂತೆಯೇ ಅಸಾರಾಮ್ ಅವರನ್ನೂ ಪರಿಗಣಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry