ಮಂಗಳವಾರ, ಜೂನ್ 15, 2021
27 °C
ಅನಗತ್ಯ ಕ್ರಮ: ಭಾರತ ತೀಕ್ಷ್ಣ ಪ್ರತಿಕ್ರಿಯೆ

ದೇವಯಾನಿ ಸೆರೆಗೆ ವಾರಂಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಅಮೆರಿಕದ ಫೆಡ­­­ರಲ್‌ ನ್ಯಾಯಾಲಯವು ತಮ್ಮ ವಿರುದ್ಧದ  ವೀಸಾ ವಂಚನೆ ಪ್ರಕರಣ ವಜಾಗೊಳಿಸಿದ ಬೆನ್ನಲ್ಲೇ ಭಾರತೀಯ ರಾಜತಾಂತ್ರಿಕ ಅಧಿ­ಕಾರಿ ದೇವಯಾನಿ ಖೋಬ್ರಾಗಡೆ ಅವರಿಗೆ ಮತ್ತೊಂದು ಗಂಡಾಂತರ ಎದುರಾಗಿದೆ.ಮನೆಕೆಲಸದ ಸಹಾಯಕಿಗೆ ಕರಾರಿ­ಗಿಂತ ಕಡಿಮೆ ಸಂಬಳ ನೀಡಿ ಶೋಷಣೆ ಮಾಡಿ­ದ್ದಾರೆ ಎಂದು ದೇವಯಾನಿ ವಿರುದ್ಧ ಪ್ರಾಸಿ­ಕ್ಯೂಷನ್‌  ಹೊಸ ಪ್ರಕ­ರಣ ದಾಖ­ಲಿ­ಸಿದೆ. ಆ ಹಿನ್ನೆಲೆಯಲ್ಲಿ  ಇಲ್ಲಿ ಮ್ಯಾನ್‌­ಹಟನ್ ನ್ಯಾಯಾಲಯ ಶನಿವಾರ ದೇವ­ಯಾನಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.ಭಾರತ ಖಂಡನೆ: ದೇವಯಾನಿ ವಿರುದ್ಧ ಹೊಸದಾಗಿ ಪ್ರಕ­ರಣ ದಾಖಲಿ­ಸಿ­ರುವುದನ್ನು ಭಾರತ ಬಲವಾಗಿ ವಿರೋಧಿಸಿದೆ.

  

ಇದೊಂದು ಅನಗತ್ಯ ಕ್ರಮ­ವಾಗಿದ್ದು ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ಮೇಲೆ ದುಷ್ಪರಿಣಾಮ ಬೀರು­ತ್ತದೆ’ ಎಂದು ಎಚ್ಚರಿಸಿದೆ.ದೇವ­ಯಾನಿ ಭಾರತಕ್ಕೆ ಹಿಂದಿರು­ಗಿದ್ದು ಅವರ ವಿರುದ್ಧ ಕ್ರಮ ಜರುಗಿಸುವ ಅಧಿ­ ಕಾರ ಅಮೆರಿಕದ ನ್ಯಾಯಾಲಯಕ್ಕೆ ಇಲ್ಲ. ಹೀಗಾಗಿ ಈ ಪ್ರಕರಣಕ್ಕೆ ಹೆಚ್ಚಿನ ಮಹತ್ವ ಇಲ್ಲ ಎಂದು ವಿದೇಶಾಂಗ ಸಚಿ­ವಾಲಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.ರಾಜತಾಂತ್ರಿಕ ರಿಯಾಯ್ತಿ ಆಧಾ­ರದ ಮೇಲೆ ಬುಧವಾರ ದೇವಯಾನಿ ವಿರು­ದ್ಧದ ವೀಸಾ ವಂಚನೆ ಪ್ರಕರಣ ಬುಧ­­ವಾರವಷ್ಟೇ ವಜಾಗೊಳಿಸಿದ್ದ ಫೆಡ­ರಲ್ ನ್ಯಾಯಾಧೀಶೆ ಶಿರಾ ಶೆಂಡ್ಲಿನ್‌, ಹೊಸ ಆರೋಪಪಟ್ಟಿ ಸಲ್ಲಿಸಲು ಯಾವುದೇ ನಿರ್ಬಂಧ ಹೇರಿರಲಿಲ್ಲ.ಅದರ ಬೆನ್ನಲ್ಲೇ ಮತ್ತೊಂದು ಪ್ರಕ­ರಣ ದಾಖಲಿಸಿ, ಬಂಧನ ವಾರಂಟ್‌ ಹೊರ­ಡಿ­ಸಿರುವ ಅಮೆರಿಕದ ನಡೆ ಅಚ್ಚರಿಗೆ ಕಾರಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.