`ದೇವರಲ್ಲಿ ವಿಶ್ವಾಸವಿದ್ದರೆ ಫಲ ಪ್ರಾಪ್ತಿ'

7

`ದೇವರಲ್ಲಿ ವಿಶ್ವಾಸವಿದ್ದರೆ ಫಲ ಪ್ರಾಪ್ತಿ'

Published:
Updated:

ಸುಳ್ಯ: `ದೇವರಲ್ಲಿ ವಿಶ್ವಾಸವಿದ್ದರೆ ಫಲಪ್ರಾಪ್ತಿಯಾಗುತ್ತದೆ' ಎಂದು ಕಾಶಿ ಮಠದ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಡಳಿತಕ್ಕೆ ಒಳಪಟ್ಟ ಸುಳ್ಯದ ವೆಂಕಟರಮಣ ದೇವ ಮಂದಿರದಲ್ಲಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಉಪವೀತ ವಟುಗಳ ನಿತ್ಯ ಸಂಧ್ಯಾವಂದನೆ ಮಾಡಬೇಕು. ಸಂಸ್ಕೃತಿ-ಸಂಸ್ಕಾರವನ್ನು ಉಳಿಸಿ ಬೆಳೆಸಬೇಕು ಎಂದರು.ಬೆಳಿಗ್ಗೆ ವೆಂಕಟರಮಣ ದೇವರ ಪುನರ್ ಪ್ರತಿಷ್ಠೆ, ಕಲಶ ಪ್ರತಿಷ್ಠೆ, ಮಹಾಗಣಪತಿ ದೇವರ ಹಾಗೂ ನವಗ್ರಹಾದಿ ನೂತನ ಶಿಲಾ ಬಿಂಬ ಪ್ರತಿಷ್ಠೆ ನಡೆಯಿತು. ದೇವ ಮಂದಿರ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಕೆ.ಉಪೇಂದ್ರ ಕಾಮತ್, ಅಧ್ಯಕ್ಷ ಕೆ.ಕೃಷ್ಣ ಕಾಮತ್, ಪ್ರಧಾನ ಕಾರ್ಯದರ್ಶಿ ಬಿ.ಪ್ರಕಾಶ್ ಶೆಣೈ, ಖಜಾಂಜಿ ಕೆ.ಅಶೋಕ ಪ್ರಭು, ಪ್ರತಿಷ್ಠಾ ಮಹೋತ್ಸವ ಸಮತಿಯ ಗೌರವಾಧ್ಯಕ್ಷ ಕೆ.ಪುಂಡಲೀಕ ಪ್ರಭು, ಅಧ್ಯಕ್ಷ ಕೆ.ಸುಧಾಕರ ಪ್ರಭು, ಪ್ರಧಾನ ಕಾರ್ಯದರ್ಶಿ ಜಿ.ಗಣೇಶ್ ನಾಯಕ್, ಖಜಾಂಜಿ ಪಿ.ರಾಮದಾಸ ಕಾಮತ್, ಅನುವಂಶೀಯ ಮೊಕ್ತೇಶರ ಬಿ.ಪುಂಡಲೀಕ ಭಟ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry