ದೇವರಾಜ ಅರಸು ಕೊಡುಗೆ ಸ್ಮರಣೆ

7

ದೇವರಾಜ ಅರಸು ಕೊಡುಗೆ ಸ್ಮರಣೆ

Published:
Updated:
ದೇವರಾಜ ಅರಸು ಕೊಡುಗೆ ಸ್ಮರಣೆ

ಚಿಕ್ಕಮಗಳೂರು: ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸ ಮಾಡಿದ್ದರಿಂದಲೇ ದೇವರಾಜ ಅರಸು ಅವರನ್ನು ಈ ದಿನ ಪ್ರತಿಯೊಬ್ಬರೂ ನೆನೆಯುವಂತಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 96ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.ರಾಜಕಾರಣಕ್ಕೆ ಜಾತಿ ಬೆಂಬಲ ಅಗತ್ಯ ಎನ್ನುತ್ತಾರೆ. ಆದರೆ ಜಾತಿಯೇ ನಾಯಕತ್ವದ ಆಧಾರ ಎನ್ನುವುದಾದರೆ ದೇವರಾಜು ಅರಸು ಅಂದು ಮುಖ್ಯಮಂತ್ರಿಯಾಗಲು ಸಾಧ್ಯವೇ ಆಗುತ್ತಿರಲಿಲ್ಲ. ಭೂ ಸುಧಾರಣೆ ಕಾನೂನು ಜಾರಿ, ಜೀತ ವಿಮುಕ್ತಿ ಕೀರ್ತಿ  ಅವರಿಗೆ ಸಲ್ಲುತ್ತದೆ ಎಂದರು.ಅರಸು ಅವರ ನಿರ್ಧಾರದಿಂದ ಯಾರು ಲಾಭ ಪಡೆದಿದ್ದರೋ ಅವರೇ ಇಂದು ಅವರನ್ನು ಮರೆತಿದ್ದಾರೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ವಿಷಾದಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಫುಲ್ಲಾ, ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ರಂಗೇಗೌಡ, ತೆಂಗುನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ರೇಖಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕನಕರಾಜ್ ಅರಸ್, ಕಡೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಯೋಗಾನಂದ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಕಾಂತ ಪೈ, ಟಿ.ಸಿ.ಪದ್ಮಚಂದ್ರಪ್ಪ, ವೆಂಕಟೇಶ್, ಬಿಎಸ್‌ಪಿ ಜಿಲ್ಲಾ ಘಟಕ ಅಧ್ಯಕ್ಷ ರಾಧಾಕೃಷ್ಣ, ಅಧಿಕಾರಿಗಳಾದ ಜಗದೀಶ್, ಕೃಷ್ಣೇಗೌಡ, ಮಹ್ಮದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry