ಸೋಮವಾರ, ಮೇ 17, 2021
28 °C

ದೇವರಾಜ ಅರಸು 31ನೇ ಪುಣ್ಯಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಡಿದ ಅದಮ್ಯ ಚೇತನ ಹಾಗೂ ಹಿಂದುಳಿದ ವರ್ಗಗಳ  ಸಮಾಜಮುಖಿ ಬೆಳೆವಣಿಗೆಯನ್ನು ಜನರಿಗೆ ತಲುಪಿಸಿದಂತಹ ನಾಯಕ ದೇವರಾಜ ಅರಸು ಅವರಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಮುಖಂಡ ಶಿವಲಿಂಗಪ್ಪ ಕಿನ್ನೂರ ತಿಳಿಸಿದ್ದಾರೆ.ನಗರದ ಜಿಲ್ಲಾ ಗೊಂಡ ಕಾಡು ಕುರುಬ ಸಂಘದ ಕಚೇರಿಯಲ್ಲಿ  ಈಚೆಗೆ  ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಶ್ರಯದಲ್ಲಿ ದಿ.ದೇವರಾಜ ಅರಸು ಅವರ 31ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ  ಅರಸು ಅವರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಮಹಾಂತೇಶ ಕೌಲಗಿ, ವೆಂಕಟೇಶ ದೊರೆಪಲ್ಲಿ, ಹಿರಿಯ ಮುಖಂಡ ಸುಭಾಷ ಗೌಳಿ, ಧರ್ಮವೀರ ಪಟ್ಟಣ, ದತ್ತಾತ್ರೇಯ ಚೌಧರಿ, ವಕೀಲರಾದ ವಿನೋದಕುಮಾರ ಶಂಕರಕಟ್ಟಿ ಸಂಗಾವಿ, ಶಿವಕುಮಾರ ಯಾದವ, ತುಕಾರಾಮ ಗೌಳಿ, ಶಂಕ್ರಯ್ಯ ಸ್ವಾಮಿ, ಹನುಮಯ್ಯ ಆಲೂರ, ಚಂದ್ರಕಾಂತ ಗುತ್ತೇದಾರ ಮತ್ತಿತರರು ಭಾಗ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.