ಗುರುವಾರ , ನವೆಂಬರ್ 21, 2019
27 °C

ದೇವರಿಗೆ ಚಿನ್ನದ ಕಿರೀಟ ಹಾಕಿದವರು ಕಂಬಿ ಎಣಿಸುತ್ತಿದ್ದಾರೆ: ಶ್ರುತಿ

Published:
Updated:

ಹಟ್ಟಿ ಚಿನ್ನದ ಗಣಿ:  ದೇವರಿಗೆ ಚಿನ್ನದ ಕಿರೀಟ ಮಾಡಿಸಿ ಹಾಕಿದವರು ಇವತ್ತು ಕಂಬಿ ಎಣಿಸುತ್ತಿದ್ದಾರೆ. ಉತ್ತಮ ಜನ ಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಚಿತ್ರ ನಟಿ ಶ್ರುತಿ ಹೇಳಿದರು.ಸೋಮವಾರ ಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಕೆಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಲಿಂಗಸುಗೂರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್‌ಬಿ ಮುರಾರಿ ಅವರಿಗೆ ಮತ ಹಾಕುವಂತೆ ಕೇಳಿಕೊಂಡರು.ಅಭ್ಯರ್ಥಿ ಎಚ್.ಬಿ. ಮುರಾರಿ ಮಾತನಾಡಿ, ಕ್ಷೇತ್ರದ ಜನರಿಗೆ ಉದ್ಯೋಗ ಅವಕಾಶ ಪಡೆಯಲು ಹಟ್ಟಿ ಚಿನ್ನದ ಗಣಿ ಕಂಪೆನಿ ಒಂದೇ ಇದೆ. ಇಲ್ಲಿ ನಿರುದ್ಯೋಗ ಯುವಕರು ಹೆಚ್ಚಿದ್ದಾರೆ. ತಾವು ಆಯ್ಕೆಯಾದರೆ ಉದ್ಯೋಗ ಅವಕಾಶಗಳು ಕಲ್ಪಿಸಿ ಕೊಡಲು ಹಟ್ಟಿ ಕಂಪೆನಿಯಿಂದ ಆರ್ಥಿಕ ಸಹಾಯ ಪಡೆದು ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸಲು ಹಾಗೂ ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚು ಆದ್ಯತೆ ನೀಡುವ ಭರವಸೆಯನ್ನು ಕೊಟ್ಟರು.

 

ಕಾರ್ಮಿಕ ಮುಖಂಡರಾದ ಅಮರಗುಂಡಪ್ಪ ನೆಲೋಗಿ, ರತ್ನ ಅಂಗಡಿ ಹಾಗೂ ಇತರರು ಇದ್ದರು.

ಪ್ರತಿಕ್ರಿಯಿಸಿ (+)