ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ!

7

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ!

Published:
Updated:
ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ!

ಮಳವಳ್ಳಿ: ದೇವರು ಕೊಟ್ರು ಪೂಜಾರಿ ಕೊಡಲಿಲ್ಲ ಎನ್ನುವಂತೆ ಸೂರಿಲ್ಲದ ನಿರ್ಗತಿಕರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ `ನಮ್ಮ ಮನೆ~ ಯೋಜನೆಯಡಿ ಹಣ ಬಿಡುಗಡೆ ಮಾಡಿದ್ದರೂ, ಇಲ್ಲಿನ ಪುರಸಭೆಯವರು ಫಲಾನುಭವಿಗಳಿಗೆ ನೀಡಲು ಮೀನಾ ಮೇಷ ಎಣಿಸುತ್ತಿರುವುದು ವಿಪರ್ಯಾಸ.ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ 400 ಮನೆಗಳು ಮಂಜೂರಾಗಿದ್ದವು. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ 310 ಅರ್ಜಿಗಳನ್ನು ಆಯ್ಕೆ ಮಾಡಿ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಹಣ ಮಂಜೂರಾತಿಗೆ ಕಳುಹಿಸಿ ಕೊಟ್ಟ ನಂತರ ಎಲ್ಲ 310 ಫಲಾನುಭವಿಗಳಿಗೆ ಸಹಾಯಧನ ಹಣ ಮಂಜೂರಾತಿ ನೀಡಿ ಮೊದಲನೆ ಕಂತಿನಲ್ಲಿ ರೂ.46.50 ಲಕ್ಷ ಹಣ ಬಿಡುಗಡೆಯಾಗಿ 6 ತಿಂಗಳಾಗಿದ್ದರೂ, ಫಲಾನುಭವಿಗಳಿಗೆ ತಲುಪಿಲ್ಲ.ನಮ್ಮಮನೆ ಯೋಜನೆಯಡಿ ಹಣ ದೊರೆಯುತ್ತದೆ ಎಂಬ ವಿಶ್ವಾಸದಲ್ಲಿ ಇದ್ದ ಗುಡಿಸಲುಗಳನ್ನು ಕಿತ್ತು ಹಾಕಿ ತಳಪಾಯವನ್ನು ನಿರ್ಮಿಸಿ ಮನೆ ಕಟ್ಟಲು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಸರ್ಕಾರ ಬ್ಯಾಂಕಿನ ಸಾಲ ಬೇಡ ಸಹಾಯ ಧನ ಬೇಕು ಎಂದು ರೂ.20 ಛಾಪ ಕಾಗದದಲ್ಲಿ ಒಪ್ಪಿಗೆ ಪಡೆದು ಹಣ ಮಂಜೂರು ಮಾಡುವಂತೆ ಸೂಚಿಸಲಾಗಿದೆ. ಅದರಂತೆ ಛಾಪ ಕಾಗದವನ್ನು ಪಡೆಯಲಾಗಿದೆ.ಈ ಬಗ್ಗೆ ಪುರಸಭೆ ಸದಸ್ಯ ದೊಡ್ಡಯ್ಯ ಪ್ರತಿ ಸಭೆಯಲ್ಲೂ ಧರಣಿ ಪ್ರತಿಭಟನೆ ನಡೆಸುತ್ತಿದ್ದು, ಆ ಸಂದರ್ಭದಲ್ಲಿ ಕಾರಣಗಳನ್ನು ಹೇಳಿ ಮುಂದೂಡಲಾಗುತ್ತಿದೆ.  ಆದರೆ ಮನೆ ಕಟ್ಟಲು ಬಡವರು ಕಾಯುವ ಪರಿಸ್ಥಿತಿ ಬಂದಿದೆ.ಶೀಘ್ರ ವಿತರಣೆ

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಅವರನ್ನು ಸಂಪರ್ಕಿಸಿದಾಗ ಫಲಾನುಭವಿಗಳನ್ನು ಶಾಸಕರ ನೇತೃತ್ವದಲ್ಲಿ ಆಯ್ಕೆ ಮಾಡಿದ್ದು, ಹಣ ಆಯ್ಕೆ ಮಾಡಿರುವ ಎಲ್ಲ ಫಲಾನುಭವಿಗಳಿಗೆ ವಿತರಿಸುವಷ್ಟು ಹಣ ಬಿಡುಗಡೆಯಾಗಿಲ್ಲ, ಇದರ ಬಗ್ಗೆ ಚರ್ಚಿಸಿ ಶೀಘ್ರವೇ ವಿತರಣೆ ಮಾಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry