ಗುರುವಾರ , ಏಪ್ರಿಲ್ 22, 2021
30 °C

ದೇವರ ಪರಿಕಲ್ಪನೆ v/s ಪ್ರಕೃತಿಯ ಪರಮಾಣು ತತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಶತಮಾನದ ಭೌತ ವಿಜ್ಞಾನವನ್ನು ಶೋಧಿಸಿ ಕಂಡ ಫಲವೇ `ಹಿಗ್ಸ್ ಬೋಸಾನ್~ ಕಣ. ಇದರಲ್ಲಿರುವ  `ಕ್ವಾಂಟಮ್~ನ ಕ್ವಾರ್ಕ್ ಜೀವ ಕಣ ವಿಶ್ವ ಸೃಷ್ಟಿಯ ಮೂಲವೆಂದು ಸತ್ಯೇಂದ್ರನಾಥ ಬೋಸ್, ಪೀಟರ್ ಹಿಗ್ಸ್ ಮತ್ತಿತರ ವಿಜ್ಞಾನಿಗಳು ಸಾರಿದ್ದಾರೆ.ವೇದೋಪನಿಷತ್ತು, ಪುರಾಣ, ಧರ್ಮಗ್ರಂಥಗಳು, ಶಿಷ್ಟ, ಜಾನಪದ ಸಾಹಿತ್ಯ ಕೃತಿಗಳು ಜಗತ್ ಸೃಷ್ಟಿಯ ಆದಿ ಮೂಲ ದೇವರೆಂದಿವೆ. ಈ ಪರಿಕಲ್ಪನೆಗೆ ಪರ‌್ಯಾಯವಾಗಿ ಕ್ವಾರ್ಕ್ ಕಣಗಳು ವಿಜ್ಞಾನಿಗಳಿಗೆ ಈ ಮನುಕುಲಕ್ಕೆ ವಿಶ್ವರೂಪ ದರ್ಶನ ನೀಡಿವೆ.

 

ಈ ಕಣಗಳ ಗ್ರಹಿಕೆಯಲ್ಲಿದ್ದ ನೊಬೆಲ್ ವಿಜ್ಞಾನಿ ಲಿಯೋನ್ ಲೆಡ್‌ರ್ಮ್ಯೋನ್ `ದ ಗಾಡ್ ಪಾರ್ಟಿಕಲ್~ (ತರಲೆ ಕಣ) `ದೇವಕಣ~ ಎಂಬ ಹೆಸರನ್ನೇ ಬಳಕೆಗೆ ತಂದದ್ದನ್ನು ಗಮನಿಸಬೇಕು. ಹೀಗಿದ್ದು ಮಾಧ್ಯಮಗಳು ಪ್ರಸಾರ ಬಳಕೆಗೆ ಬಳಸಿಕೊಂಡದ್ದು ವಿಜ್ಞಾನ ಮೂಲದ ಹೆಸರು `ಹಿಗ್ಸ್ ಬೋಸಾನ್  ಕ್ವಾಂಟಮ್~ - ಕ್ವಾರ್ಕ್‌ಕಣಗಳ ಹೆಸರನ್ನಲ್ಲ `ದೇವಕಣ~ ಎಂಬ ಹೆಸರನ್ನು. ಈ ಕಾರಣದಿಂದಲೇ ಸಾರ್ವಜನಿಕರಲ್ಲಿ  ಹೆಚ್ಚು ಪ್ರಶ್ನೆಗಳು ಕಾಡುತ್ತಿವೆ.ಪ್ರಾಚೀನ ಗ್ರಂಥಗಳೆಲ್ಲ ಪ್ರಕೃತಿಯ ಅದೃಶ್ಯ ಶಕ್ತಿಯನ್ನೇ ದೇವರೆಂದು ಕರೆದು ಆ ದೇವರುಗಳನ್ನು ಅಗೋಚರ ಪ್ರತಿಭೆಯ ಪ್ರತೀಕಗಳಾಗಿ ಶಕ್ತಿಯ ಸಂಕೇತಗಳಾಗಿ ಕಂಡಿವೆ. ವಿಶ್ವಸೃಷ್ಟಿಗೆ ಮೂಲವಾದ ಪ್ರಕೃತಿ ಶಕ್ತಿಯನ್ನು ವೈದಿಕ ಧರ್ಮ -ಏಕಮೇವನಾದ ದೇವನಿಗೆ ವಿಶ್ವವೇ ಕಣ್ಣು, ವಿಶ್ವವೇ ಮುಖ, ವಿಶ್ವವೇ ಬಾಹು, ವಿಶ್ವವೇ ಪಾದ. ಅವನು ಭೂಮ್ಯೋಕಾಶಗಳ ಪರ‌್ಯಂತ ವ್ಯಾಪಕವಾಗಿದ್ದಾನೆ ಎಂದಿದೆ. ಇದನ್ನೇ ಕ್ರೈಸ್ತರು, ಯಹೂದ್ಯರು ಸಾರಿದ್ದಾರೆ. ಇಸ್ಲಾಮಿಯರು ಅನುಮೋದಿಸಿದ್ದಾರೆ. ಪುರಾಣಗಳು ಪುನರುಚ್ಚರಿಸಿವೆ. ಈ ಎಲ್ಲಾ ಹಿನ್ನೆಲೆ ನೋಡಿದರೆ ದೇವರು ವಿಶ್ವವ್ಯಾಪಿ ಎನ್ನುವುದು ಗೊತ್ತಾಗುತ್ತದೆ.ಸೃಷ್ಟಿಯ ಮೂಲದ ಬಗ್ಗೆ ಪ್ರಾಚೀನ ಪರಿಕಲ್ಪನೆಗಳಲ್ಲೆ ಭಿನ್ನತೆಯಿದೆ. ವೈದಿಕ, ಕ್ರೈಸ್ತ, ಇಸ್ಲಾಂ ಧರ್ಮಗಳು ದೇವರನ್ನ ಮೂಲಕರ್ತೃವನ್ನಾಗಿ ಕಂಡಿವೆ. ಆದರೆ ಬೌದ್ಧ ಮತ್ತು ಜೈನ ಧರ್ಮಗಳು ದೇವರ ಪರಿಕಲ್ಪನೆಯನ್ನು ತಿರಸ್ಕರಿಸಿ ಸ್ವಾಭಾವಿಕವಾದ ಪ್ರಕೃತಿಯ ಪರಮಾಣು ತತ್ವವನ್ನು ಪ್ರತಿಪಾದಿಸುತ್ತವೆ. ಬುದ್ಧ ಈ ವಿಶ್ವ ಸೃಷ್ಟಿಯಿಂದಾದುದಲ್ಲ, ವಿಕಸನದಿಂದಾದುದ್ದು. ಅದು ನಿಸರ್ಗದ ವಿಸ್ತರಣೆ ಎಂದೇ ನಂಬಿದವನು.ಜೈನ ಧರ್ಮವು ಇದೆ ಅಂಶವನ್ನು ಒಪ್ಪಿ ಈ ಪ್ರಕೃತಿ ವಿಕಾಸ `ಪುದ್ಗಲಾಣು~ ವಿನ ಕ್ರಿಯೆಯಿಂದಾದುದ್ದೆಂದು ವಿಶ್ಲೇಷಿಸುತ್ತದೆ. ಈ ಧರ್ಮಗಳ ತಾತ್ವಿಕ ಮತ್ತು ವೈಜ್ಞಾನಿಕ ಚಿಂತನೆಯ ಮೂಲವನ್ನೇ ಹಿಡಿದು ಚಾರ್ವಾಕರು, ಗ್ರೀಕರು, ಎಪಿಕ್ಯೂರಸ್, ಡೆಮಾಕ್ರಟಿಸ್ ಮತ್ತು ಆಧುನಿಕ ಆಂಗ್ಲೇಯರಲ್ಲಿ ಸರ್‌ಚಾರ್ಲಸ್ ಬ್ರಾಡ್ಲೆ, ಅಮೆರಿಕದಲ್ಲಿ ಇಂಗರಸಾಲ್ ಮುಂತಾದವರೆಲ್ಲ ದೇವರ ಕಲ್ಪನೆಯನ್ನು ನಂಬದೆ ಜಗತ್ತು ತನ್ನಿಂದ ತಾನೆ ಯಂತ್ರದಂತೆ ನಡೆಯುತ್ತದೆ. ಇದಕ್ಕೆ ದೇವರ ಅವಶ್ಯಕತೆಯಿಲ್ಲ, ಪ್ರಕೃತಿಯ ಅನೇಕ ಪರಮಾಣು ಸಂಯೋಗದಿಂದ ನಾನಾ ಬಗೆಯ ಸೃಷ್ಟಿಯುಂಟಾಗುತ್ತದೆ ಎನ್ನುತ್ತಾರೆ. ಇವರೆಲ್ಲ ಪರಮಾಣುಗಳ ಸಂಯೋಗದಿಂದ ಸೃಷ್ಟಿ ಕ್ರಿಯೆಯನ್ನು ಗುರುತಿಸುತ್ತಾರೆ. ಈ ಪರಮಾಣುಗಳಿಂದಾದುವೇ ಪಂಚಭೂತಗಳು (ಪೃಥ್ವಿ, ಅಗ್ನಿ, ವಾಯು, ಗಾಳಿ, ನೀರು, ಆಕಾಶ). ಇವುಗಳಲ್ಲಿ ಆಕಾಶ ತತ್ವವನ್ನು ಚಾರ್ವಾಕರು ಒಪ್ಪುವುದಿಲ್ಲ. ಬುದ್ಧ ತತ್ವ, ಪಾಶ್ಚಾತ್ಯ ದರ್ಶನಗಳು, ಮೊದಲ ನಾಲ್ಕು ತತ್ವಗಳನ್ನು ಮಾತ್ರ ಒಪ್ಪುತ್ತವೆ. ಇಲ್ಲಿ `ಆಕಾಶ ತತ್ವ~ ವನ್ನು ಬಿಟ್ಟಂತೆ `ಭೂಮಿತತ್ವ~ವನ್ನು ಬಿಡಬಹುದು. ಏಕೆಂದರೆ ಆಕಾಶದಂತೆ ಭೂಮಿಯು ವಿಶ್ವಸೃಷ್ಟಿಯ ನಂತರದವು. ಆದ್ದರಿಂದ ಭೂಮಿಗೂ ಮೂಲ ಗಾಳಿ, ನೀರು, ಅಗ್ನಿ ಈ ಮೂರು ಭೂತ ತತ್ವಗಳೇ ಪ್ರಕೃತಿ ವಿಶ್ವಕ್ಕೆ ಮೂಲವಾದವು.ಈ ಮೂರು ಭೂತಗಳ ಮೂಲ ಪರಮಾಣು. ಇವುಗಳಲ್ಲಿ ಪ್ರೊಟಾನ್, ನ್ಯೂಟ್ರಾನ್, (ಸೂಕ್ಷ್ಮಾಣು)ಗಳಿರುತ್ತವೆ. ನೀರಿನಲ್ಲಿ ಜಲಜನಕ ಆಮ್ಲಜನಕ ಇರುವಂತೆ. ಪ್ರೋಟಾನ್‌ಗಿಂತ 120 ಪಟ್ಟು ಹೆಚ್ಚು ದ್ರವ್ಯರಾಶಿಯುಳ್ಳ ಕ್ವಾಂಟಮ್(ಅತಿಸೂಕ್ಷ್ಮಾಣು)ಗಳಿವೆ. ಇದರಲ್ಲಿ `ಕ್ವಾರ್ಕ್~ ಕಣಗಳಿವೆ. ಇವು ಸುಮಾರು 40 ಬಗೆಯಲ್ಲಿದ್ದು ತಮ್ಮ ಸ್ವರೂಪವನ್ನೇ ಬದಲಾವಣೆ ಮಾಡಿಕೊಳ್ಳುವ ಗುಣವಿದೆ. ಇದೇ ನಿಜವಾದ ಪ್ರಕೃತಿಯ ಶಕ್ತಿ.  ಮಾನವನ ಗ್ರಹಿಕೆಗೆ ನಿಲುಕದಂತಹ ಕ್ರಿಯಾರೂಪಿ ಕಣಗಳಿವು. ಪ್ರಕೃತಿಯ ಈ ಮೂಲಕಣವನ್ನು ಕಂಡುಕೊಂಡಿದ್ದೇ ಈ ಶತಮಾನದ ವಿಜ್ಞಾನ ಸಾಧನೆ.ಭೌತ ವಿಜ್ಞಾನದ ಪರಮಾಣು ಶೋಧನೆಯ ಕೀರ್ತಿ ಸತ್ಯೇಂದ್ರನಾಥ್ ಬೋಸ್, ಪೀಟರ್ ಹಿಗ್ಸ್ ಮೊದಲಾದವರಿಗೆ ಸಲ್ಲುತ್ತದೆ. ಇದನ್ನು ಐನ್‌ಸ್ಟೀನ್ ಸಹ ತಮ್ಮ ಸಾಪೇಕ್ಷ ಸಿದ್ದಾಂತದಲ್ಲಿ ಬಳಸಿಕೊಂಡು  ಬೋಸ್ ಐನ್‌ಸ್ಟೀನ್ ಸಿದ್ದಾಂತವೆಂದು ಕರೆದಿದ್ದಾರೆ. ಸೃಷ್ಟಿಗೆ ಏನೇ ಕಾರಣಗಳಿದ್ದರೂ ಅದರ ಮೂಲ `ಹಿಗ್ಸ್ ಬೋಸ್~ ಜೀವ ಕಣವಾಗಿದೆ. ಇದು ನಾನಾ ರೂಪ, ಆಕಾರ, ಸೌಂದರ‌್ಯ ಗುಣಗಳನ್ನೊಳಗೊಂಡ ಕಣವಾದ್ದರಿಂದ ಸೃಷ್ಟಿಯ ನಾನಾ ರೂಪಗಳಿಗೂ ಮೂಲವೆನ್ನುವುದು ಸರಿಯಾಗಿಯೇ ಇದೆ.ಜಗತ್ತಿನ ಅನನ್ಯ ಜೀವಿಗಳ ಕ್ರಿಯಾ ರೂಪಿ ಸೃಷ್ಟಿ ಗುಣಗಳುಳ್ಳ ಈ ಕ್ವಾರ್ಕ್ ಜೀವ ಕಣಗಳನ್ನೊಳಗೊಂಡ ವಿಶ್ವವನ್ನು `ಕ್ವಾರ್ಕ್‌ವ್ಯೆಹ~ ಎನ್ನಬಹುದು. ಇವೆಲ್ಲ ಕ್ವಾಂಟಮ್‌ನೊಳಗೆ ಅಡಕವಾಗಿರುವುದರಿಂದ  `ಕ್ವಾಂಟಮ್ ವಿಶ್ವ~ ಇವುಗಳ ಪ್ರೋಟಾನ್, ನ್ಯೂಟ್ರಾನ್ ಸೂಕ್ಷ್ಮಾಣುಗಳಾಗಿ ಅಡಕವಾಗಿರುವ ಬಂಧವೆ ಪರಮಾಣು.ಈ ಅಸಮಾನ್ಯ, ಅಸಂಖ್ಯಾ ಪರಮಾಣುಗಳ ಸಂಯೋಜನೆಯ ಬಂಧವೇ ಈ ತ್ರಿಭೂತಗಳು. ಪಂಚಭೂತಗಳಲ್ಲಿ  ಭೂಮಿ, ಆಕಾಶಗಳೆರಡನ್ನು ಬಿಟ್ಟು ಗಾಳಿ, ನೀರು, ಅಗ್ನಿಗಳೆಂಬ ಮೂರು ಭೂತಗಳ ವ್ಯೆಹವು ಪ್ರಕೃತಿಯ ಭೌತ-ಅಭೌತ ವೃತ್ತದೊಳಗೆ ಸರ್ವಕಾಲಿಕ ಸ್ವಾಭಾವಿಕ ಕ್ರಿಯಾರೂಪಿಯಾಗಿ ವಿಕಾಸವಾಗುತ್ತಿರುವ ಗುಣವಾದ್ದರಿಂದ ಭೂಮಿ, ಆಕಾಶವು ಸೇರಿ ಇಡೀ ಪ್ರಕೃತಿ ವಿಶ್ವವನ್ನು ` ತ್ರಿಭೂತ ವ್ಯೆಹ~ ವೆಂದು ಕರೆಯಲಾಗಿದೆ.ವಿಶ್ವ ಸೃಷ್ಟಿಗೆ ಈ ತ್ರಿಭೂತಗಳಲ್ಲಿ  ಮೂಲ ಯಾವುದು ಎಂಬ ವಾದಗಳು ಪ್ರಾಚೀನ ಕಾಲದಿಂದಲೂ ನಡೆದಿವೆ. ಈ ವಾದಗಳನ್ನೆಲ್ಲ ನೋಡಿದರೆ ಈ ಯಾವೊಂದರಿದಲೂ ಜಗತ್ ಸೃಷ್ಟಿಯಾಗಿಲ್ಲ.  ಮೂರು ಭೂತ ತತ್ವಗಳ ಸಂಯೋಗದಿಂದಾದ ಪರಿಣಾಮವೇ ವಿಶ್ವಸೃಷ್ಟಿಗೆ ಮೂಲ. ಇಂತಹ ಸಂಯೋಗ ಕ್ರಿಯೆಯ ಘರ್ಷಣೆಯೇ ಸ್ಪೋಟವಾಗಿ ಶಬ್ದ ಉತ್ಪತ್ತಿಯಾಗಿದೆ.

 

ಇದನ್ನೇ ವಿಜ್ಞಾನ ನೋವಾವಾದ, ಸೂಪರ್‌ನೋವಾವಾದ, ಸ್ಟೋಟವಾದ, ಬಿಗ್‌ಬ್ಯಾಂಗ್ ಥಿಯೆರಿ, ಸೀಫಿಡ್‌ವಾದ, ವಿಭಜನವಾದ, ವಿದ್ಯುತ್‌ಕಾಂತವಾದ, ಮಹಾನೋವಾಗಳಂತಹ ಹದಿನಾರು ವೈಜ್ಞಾನಿಕ ವಾದಗಳು ಸೂರ‌್ಯ ಕೇಂದ್ರಿತ ಸಿದ್ಧಾಂತವನ್ನು ಪ್ರತಿಪಾದಿಸಿವೆ. ಈ ಸ್ಫೋಟವಾದವನ್ನೇ ಮಧ್ಯಕಾಲೀನ ಶೈವ, ವೀರಶೈವ ಪುರಾಣಗಳು ಓಂಕಾರದಿಂದ ವಿಶ್ವೋತ್ಪತ್ತಿಯಾಗಿದೆ ಎಂದರೆ; ಆಧುನಿಕ ಪರಿಕಲ್ಪನೆಯಲ್ಲಿ ಇದನ್ನು ನಾದ ತತ್ವದಡಿ ಆದದ್ದೆಂದು ಹೇಳುತ್ತಾರೆ.

 

ಇವರು ಸ್ಫೋಟ ಕ್ರಿಯೆಯನ್ನು ಆದಿ ಪ್ರಳಯವೆಂದು ಹೇಳುವುದು ಗಮನಸೆಳೆಯುತ್ತದೆ. ಈ ರೀತಿಯ ಅಣು ಸ್ಪೋಟದಿಂದಾಗಿ ಸೂರ‌್ಯ, ಚಂದ್ರ, ಭೂಮಿ, ನಕ್ಷತ್ರ ತಾರೆಗಳೆಲ್ಲ ಸೃಷ್ಟಿಯಾಗಿರುವುದೆಂದು ಆಧುನಿಕ ಸ್ಪೋಟವಾದಗಳು ಸ್ಪಷ್ಟಪಡಿಸಿವೆ.ತ್ರಿಭೂತಗಳು ಸ್ಪೋಟದಿಂದ ಛಿದ್ರ ಛಿದ್ರವಾಗಿ ಸಿಡಿದು ವಿಶ್ವದಲ್ಲಿ ಹರಡಿವೆ. ಅವುಗಳಲ್ಲಿ ಮೂರರ ಮಿಶ್ರಣ ಭಾಗವು ಇದ್ದು; ಪ್ರತ್ಯೇಕ ಬಿಡಿ ಬಿಡಿ ಭಾಗಗಳಾಗಿರುವುದನ್ನು ಕಾಣಬಹುದು. ಸಿಡಿತದಲ್ಲಿ ಶಾಖಾಂಶವೇ(ಅಗ್ನಿ) ಪ್ರತ್ಯೇಕ ಉಂಡೆಯಾಗಿ ಹಾರಿಬಿದ್ದ ಭಾಗವೇ ಸೂರ‌್ಯ, ಸೂರ‌್ಯನಿಗಿಂತ ದೊಡ್ಡ ಮತ್ತು ಸಣ್ಣ ನಕ್ಷತ್ರ ಕಾಯಗಳಾಗಿ ಆಕಾಶದಲ್ಲಿ ಹರಡಿವೆ.ಇದೇ ರೀತಿ ಪ್ರತ್ಯೇಕವಾಗಿ ಸಿಡಿದು ಬಿದ್ದ ವಾಯುಗೊಳ, ಜಲಗೊಳಗಳು ಭೂಮಿ ಮತ್ತಿತರ ಕೆಲವು ಆಕಾಶಕಾಯಗಳಲ್ಲಿ ಅವುಗಳ ಸುತ್ತ ಮುತ್ತ ವಿಕಾಸಗೊಂಡಿವೆ. ಈ ಮೂರು ಮಿಶ್ರಧಾತುಗಳ ಕ್ರಿಯಾ ರೂಪಿ ಭಾಗವೆ ಭೂಮಿಯಾಗಿದೆ. ಈ ಶತಮಾನದವರೆಗೆ ಭೂಮಿಯಂತಹ ಇನ್ನೊಂದು ಗ್ರಹ ಜಗತ್ತಿಗೆ ಗೋಚರಿಸಿರಲಿಲ್ಲ.21ನೇ ಶತಮಾನ ಇಂತಹ ಇನ್ನೊಂದು ಭೂಮಿಯನ್ನು ವಿಜ್ಞಾನ ಕಂಡಿದೆ. ಕೇವಲ ಈಗ ಕಂಡಿರುವ ಎರಡೇ ಭೂಮಿಗಳಲ್ಲ ಇನ್ನು ಹಲವಾರಿವೆ. ಅದೇ ರೀತಿ ಮಂಗಳ, ಬುಧ, ಗುರು, ಶುಕ್ರ, ಶನಿಯಂತಹ ಹಲವಾರು ಗ್ರಹ ನಕ್ಷತ್ರ ತಾರೆಗಳು ವಿಭಿನ್ನವಾಗಿ ಅಗೋಚರ ಕಾಯಗಳಾಗಿ ಅನನ್ಯ ದೂರದಲ್ಲಿವೆ. ಅವನ್ನೆಲ್ಲ ಶೋಧಿಸಬೇಕಿದೆ.ಮಾನವ ಜ್ಞಾನ ಮಿತಿಯಿಂದ ಪ್ರಾಚೀನ ಕಾಲದ ಬೈಬಲ್ ಭೂಮಿಯ ಸುತ್ತ ಸೂರ‌್ಯ, ಚಂದ್ರ, ಮತ್ತಿತರ ಗ್ರಹಗಳು ಸುತ್ತುತ್ತಿವೆ ಎಂದು  ಭೂಮಿ ಕೇಂದ್ರಿತ ಸಿದ್ದಾಂತವನ್ನು ಜಗತ್ತಿಗೆ ಒಪ್ಪಿಸಿತ್ತು. ಇದಕ್ಕೆ ಪೂರಕವಾಗಿ ಅರಿಸ್ಟಾಟಲ್, ಹಿಪಾರ್ಕಸ್, ತೊಲೆಮಿ ಭೂಕೇಂದ್ರಿತ ಸಿದ್ಧಾಂತವನ್ನು ಮಂಡಿಸಿದ್ದರು. ಇದಕ್ಕೂ ಮುಂಚಿತವಾಗಿ ಎಂಪಿಡಾಕ್ಲೆಸ್, ಪ್ಲೆಟೋ ಮುಂತಾದ ತತ್ವ ಜ್ಞಾನಿಗಳು ಭೂಮಿ ಆಕಾಶದ ಗೋಳವೆಂದು ಊಹಿಸಿದ್ದರು.ಸೌರವ್ಯೆಹ ದ ಸೂರ‌್ಯ ಕೇಂದ್ರಿತವಾದ ಸಿದ್ಧಾಂತಗಳನ್ನು ಜನ ಒಪ್ಪಿ ಸಾಗುತ್ತಿದ್ದಾರೆ. ಆದರೆ 1998ರಲ್ಲೇ ಸೂರ‌್ಯನಿಗಿಂತ ದೊಡ್ಡ ನಕ್ಷತ್ರವನ್ನು ವಿಜ್ಞಾನ ಗುರುತಿಸಿದೆ. ಅಲ್ಲಿಂದ ಸೂರ‌್ಯನ ಹುಟ್ಟು ಯಾರಿಂದ, ಎಲ್ಲಿಂದ, ಹೇಗೆ ? ಸಾಧ್ಯವಾಯಿತೆಂಬ ಪ್ರಶ್ನೆಗಳು ಕಾಡಿವೆ.

 

ಆದ್ದರಿಂದ ಸೂರ‌್ಯನಿಗಿಂತ ದೊಡ್ಡ ನಕ್ಷತ್ರಗಳಿಂದ ಸೂರ‌್ಯ ಮತ್ತಿತರ ಚಿಕ್ಕ ನಕ್ಷತ್ರಗಳು ಹುಟ್ಟಿರುವ ಭಾವನೆಗಳು ಬಂದೊಡನೆ ಸೂರ‌್ಯ ಕೇಂದ್ರಿತ ಸೌರವ್ಯೆಹ ಸಿದ್ಧಾಂತಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳಲಾರಂಭಿಸಿವೆ. ಏಕೆಂದರೆ ಸೂರ‌್ಯನು ಕೂಡ ಇನ್ನೊಂದು ಗ್ರ್ಯಾವಿಟಿಯಿಂದ ನಿಂತು ಚಲಿಸುತ್ತಿದ್ದಾನೆ. ಆ ದ್ರವ್ಯರಾಶಿ ಕಣಗಳಿಂದಲೇ ಸೂರ‌್ಯನಿಗಿಂತ ದೊಡ್ಡ ನಕ್ಷತ್ರಗಳಿರುವುದು. ಆ ಗುರುತ್ವಾಕರ್ಷಣ ಶಕ್ತಿಯಿರುವುದೇ ಈ ಕ್ವಾಂಟಮ್‌ನ ಕ್ವಾರ್ಕ್ ಅಣುಗಳಲ್ಲಿ. ಆದ್ದರಿಂದಲೇ ಇಡೀ ಜಗತ್ತನ್ನು `ಕ್ವಾರ್ಕ್ ವ್ಯೆಹ~ವೆಂದು ಕರೆಯುವುದು ಉಚಿತವಾಗಿದೆ.ಈ ಕ್ವಾರ್ಕ್ ಕಣಗಳು ಘನ, ದ್ರವ, ಅನಿಲ ರೂಪದಲ್ಲಿರುವ ಮೂರು ಭೂತಗಳ ಮಿಶ್ರಣವಾಗಿದೆ.  ಇದು ಪ್ರಕೃತಿಯ ಸ್ವಾಭಾವಿಕ ಕ್ರಿಯೆ. ಇದು ತ್ರಿಕಾಲ, ತ್ರಿಭೂತಗಳ ಕ್ರಿಯಾರೂಪಿ ಗುಣವಾಗಿದೆ. ಆದ್ದರಿಂದಲೇ ಸೃಷ್ಟಿ, ಸ್ಥಿತಿ, ಲಯಾಧಾರಿತವಾದ ಪ್ರಕೃತಿಯ ಸ್ವಾಭಾವಿಕವಾದ ವಿಶ್ವರೂಪಿ ಕ್ರಿಯೆ ನಿಗೂಢವಾಗಿರುವುದು. ಈ ವಿಶ್ವವನ್ನು  ತ್ರಿಭೂತ ವ್ಯೆಹ  ವೆಂದು ಕರೆಯುವ ಎಲ್ಲಾ ಸಾಕ್ಷಿ ಆಧಾರಗಳು ವೈಜ್ಞಾನಿಕವಾಗಿ ಸ್ಪಷ್ಟವಾಗಿರುವುದರಿಂದ ಖಗೋಳ, ವಿಜ್ಞಾನ, ಸಾಹಿತ್ಯ, ತತ್ವ-ಸಿದ್ಧಾಂತಗಳೆಲ್ಲ ಮತ್ತೆ ಪುನರ್‌ಸೃಷ್ಟಿ ಆಗಬೇಕಾದ ಅನಿವಾರ‌್ಯತೆ ಈ ಶತಮಾನದ್ದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.