ಗುರುವಾರ , ಮೇ 6, 2021
31 °C

ದೇವಳ ಸ್ಥಳ-ರಸ್ತೆ ನಿರ್ಮಾಣಕ್ಕೆ ಸಂಚು ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರ್ಗಾಲು (ಬೈಂದೂರು): ಇಲ್ಲಿನ ಭಗವತಿ ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಭಗವತಿ ಮರ್ಲುಚಿಕ್ಕು ಹಾಗೂ ಪರಿವಾರ ದೈವಗಳ ದೈವಸ್ಥಾನ ಇರುವ ಸರ್ಕಾರಿ ಸ್ಥಳದ ಮೂಲಕ ವ್ಯಕ್ತಿಯೊಬ್ಬರು ಅಕ್ರಮವಾಗಿ ರಸ್ತೆ ನಿರ್ಮಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ಸ್ಥಳೀಯರು ದೇವಸ್ಥಾನದ ಆವರಣದಲ್ಲಿ   ಭಾನುವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಭಗವತಿ ಸುಬ್ರಾಯ ಶ್ಯಾನುಭಾಗ್, `ಈ ದೇವಾಲಯಕ್ಕೆ 400 ವರ್ಷಇತಿಹಾಸವಿದೆ. ದೇವಸ್ಥಾನದ ಸ್ಥಳವು ಸರ್ಕಾರಕ್ಕೆ ಸೇರಿದ್ದು, ಇಲ್ಲಿ ಯಾವುದೇ ದಾರಿ ಅಥವಾ ರಸ್ತೆ ಇಲ್ಲ. ಅದರೆ ಇತ್ತೀಚೆಗೆ ಸನಿಹದ ಸ್ಥಳವನ್ನು ಖರೀದಿಸಿರುವ ವ್ಯಕ್ತಿ ಅಲ್ಲಿಗೆ ಹೋಗಲು ದೇವಸ್ಥಾನದ ಸ್ಥಳದ ಮೂಲಕ ರಸ್ತೆ ಇದೆ ಎಂದು ಹೇಳಿಕೊಂಡು ರಸ್ತೆ ನಿರ್ಮಿಸಲು ಇನ್ನಿಲ್ಲದ ಪ್ರಯತ್ನ ನಡೆಸ್ದ್ದಿದಾರೆ.

 

ಒಂದು ಹಂತದಲ್ಲಿ ಅವರು ಕೆಲವರನ್ನು ಸೇರಿಸಿಕೊಂಡು ಆವರಣ ಕೆಡವಲೂ ಮುಂದಾಗಿದ್ದರು. ಅದರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಈಗ ಹಕ್ಕು ಸ್ಥಾಪಿಸಲು ಅವರು ಮಾಧ್ಯಮಗಳ ಮೊರೆ ಹೋಗಿದ್ದಾರೆ~ ಎಂದು ಆರೋಪಿಸಿದರು.    `ರಸ್ತೆ ನಡೆಸಲು ಸಂಚು ನಡೆಸಿರುವ ಸ್ಥಳದಲ್ಲಿ ನಮ್ಮ ಜನಾಂಗದವರು ಆರಾಧಿಸುವ ದೈವ ಇದೆ. ಯಾವುದೇ ಕಾಲದಲ್ಲಿ ಅಲ್ಲಿ ರಸ್ತೆ ಇ್ದ್ದದಿಲ್ಲ. ಈಗಲೂ ಅದನ್ನು ಆಕ್ರಮಿಸಲು ಬಿಡುವುದಿಲ್ಲ~ ಎಂದು ದಲಿತ ಶೇಷ ಗಜಗನಬಲ್ಲೆ ಹೇಳಿದರು.ಗ್ರಾ.ಪಂ ಅಧ್ಯಕ್ಷ ಸುಂದರ ಕೊಠಾರಿ, ಸದಸ್ಯ ಎಂ. ಗೋವಿಂದ, ಬೈಂದೂರು ಗ್ರಾ.ಪಂ ಉಪಾಧ್ಯಕ್ಷ ವೆಂಕಟ ಪೂಜಾರಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.